ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್‌: ಜೊಕೊವಿಚ್‌, ಇಗಾ ಶ್ವಾಂಟೆಕ್‌ಗೆ ಅಗ್ರ ಶ್ರೇಯಾಂಕ

Published 11 ಜನವರಿ 2024, 4:42 IST
Last Updated 11 ಜನವರಿ 2024, 4:42 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಎಪಿ): ಹಾಲಿ ಚಾಂಪಿಯನ್ ನೊವಾಕ್‌ ಜೊಕೊವಿಚ್‌ (ಸರ್ಬಿಯಾ) ಮತ್ತು ಇಗಾ ಶ್ವಾಂಟೆಕ್‌ (ಪೋಲೆಂಡ್‌) ಅವರಿಗೆ ಭಾನುವಾರ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಆರಂಭವಾಗುವ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ನೀಡಲಾಗಿದೆ.

‍‍ಪುರುಷರ ವಿಭಾಗದ ಶ್ರೇಯಾಂಕವು ಎಟಿಪಿ ರ‍್ಯಾಂಕಿಂಗ್ ಅನುಸಾರವಾಗಿ ಇದೆ. 2023ರ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಜೊಕೊವಿಚ್‌ ಅವರನ್ನು ಸೋಲಿಸಿದ ಏಕೈಕ ಆಟಗಾರ ಕಾರ್ಲೋಸ್‌ ಅಲ್ಕಾರಾಜ್‌ (ಸ್ಪೇನ್‌) ಅವರು ಎರಡನೇ ಶ್ರೇಯಾಂಕ ಪಡೆದಿದ್ದಾರೆ. ಡೇನಿಯಲ್ ಮೆಡ್ವೆಡೆವ್‌ (ರಷ್ಯಾ), ಯಾನಿಕ್ ಸಿನ್ನರ್ (ಇಟಲಿ), ಆ್ಯಂಡ್ರೆ ರುಬ್ಲೇವ್‌ (ರಷ್ಯಾ), ಅಲೆಕ್ಸಾಂಡರ್‌ ಜ್ವರೇವ್ (ಜರ್ಮನಿ), ಸ್ಟಿಫಾನೊಸ್‌ ಸಿಸಿಪಸ್‌ (ಗ್ರೀಸ್‌), ಹೋಲ್ಗರ್‌ ರೂನ್‌ (ಡೆನ್ಮಾರ್ಕ್‌) ಕ್ರಮವಾಗಿ ಮೂರರಿಂದ ಎಂಟರವರೆಗಿನ ಶ್ರೇಯಾಂಕ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಮೊದಲ ಎಂಟು ಆಟಗಾರ್ತಿಯರು ಡಬ್ಲ್ಯುಟಿಎ ರ‍್ಯಾಂಕಿಂಗ್‌ ಪ್ರಕಾರ ಶ್ರೇಯಾಂಕ ಪಡೆದಿದ್ದಾರೆ. ಬಾರ್ಬರಾ ಕ್ರೇಸಿಕೋವಾ (ಝೆಕ್‌ ರಿಪಬ್ಲಿಕ್‌) ಅವರು ಒಂಬತ್ತನೇ ಶ್ರೇಯಾಂಕಕ್ಕೆ ಬಡ್ತಿ ಪಡೆದಿದ್ದಾರೆ. 2023ರಲ್ಲಿ ಫ್ರೆಂಚ್‌ ಓಪನ್‌ ಫೈನಲ್ ತಲುಪಿದ್ದ ಝೆಕ್‌ ರಿಪಬ್ಲಿಕ್‌ನ ಕರೋಲಿನಾ ಮುಚೋವಾ ಗಾಯಾಳಾಗಿ ಈ ಟೂರ್ನಿಗೆ ಅಲಭ್ಯರಾಗಿರುವ ಕಾರಣ

ಅರಿನಾ ಸಬಲೆಂಕಾ (ಬೆಲಾರಸ್‌), ಎಲೆನಾ ರಿಬಾಕಿನಾ (ಕಜಕಸ್ತಾನ), ಕೊಕೊ ಗಫ್ (ಅಮೆರಿಕ), ಜೆಸಿಕಾ ಪೆಗುಲಾ (ಅಮೆರಿಕ), ಆನ್ಸ್‌ ಜೇಬರ್ (ಟ್ಯುನೀಷಿಯಾ), ಮರ್ಕೆತಾ ವೊಂದ್ರುಸೋವಾ (ಝೆಕ್‌ ರಿಪಬ್ಲಿಕ್‌), ಮರಿಯಾ ಸಕ್ಕರಿ (ಗ್ರೀಸ್‌) ಕ್ರಮವಾಗಿ ಎರಡರಿಂದ ಎಂಟರವರೆಗಿನ ಶ್ರೇಯಾಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT