ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾದ ಶ್ರೇಷ್ಠ ತಂಡ ರೂಪಿಸಲಿರುವ ಸ್ಟಿಮ್ಯಾಚ್

ಭಾರತ ಫುಟ್‌ಬಾಲ್‌ನ ರಾಹುಲ್‌ ಭೆಕೆ, ಬ್ರೆಂಡನ್‌ ಫರ್ನಾಂಡೀಸ್‌ ಹೇಳಿಕೆ
Last Updated 22 ಮೇ 2019, 18:25 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಫುಟ್‌ಬಾಲ್‌ ತಂಡದಕೋಚ್‌ ಇಗೊರ್‌ ಸ್ಟಿಮ್ಯಾಚ್‌ ಅವರು ತಂಡವನ್ನು ಏಷ್ಯಾದ ಶ್ರೇಷ್ಠ ತಂಡಗಳಲ್ಲಿ ಒಂದಾಗಿಸಲು ಬಯಸಿದ್ದಾರೆ ಎಂದು ತಂಡದ ಆಟಗಾರರಾದ ರಾಹುಲ್‌ ಭೆಕೆ ಹಾಗೂ ಬ್ರೆಂಡನ್‌ ಫರ್ನಾಂಡೀಸ್‌ ಹೇಳಿದ್ದಾರೆ.

ಕೋಚ್‌ ಹುದ್ದೆಗೆ ಸ್ಟಿಮ್ಯಾಚ್‌ ನೇಮಕವಾಗಿರುವುದು ಹಲವು ಆಟಗಾರರಲ್ಲಿ ಆಶಾವಾದ ಹೆಚ್ಚಿಸಿದೆ. ರಾಷ್ಟ್ರೀಯ ಹಾಕಿ ಶಿಬಿರಕ್ಕೆ ಒಂಬತ್ತು ನೂತನ ಆಟಗಾರರನ್ನು ಸೇರಿಕೊಂಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ.

‘ಕೋಚ್‌ ಸ್ಟಿಮ್ಯಾಚ್‌ ನೇತೃತ್ವದಲ್ಲಿ ನಾವು ಹಲವು ಬಾರಿ ಮಾತುಕತೆ ನಡೆಸಿದ್ದೇವೆ. ತಂಡವಾಗಿ ಆಡುವ ನಮ್ಮ ಸಾಮರ್ಥ್ಯವನ್ನು ಅವರು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ.ಏಷ್ಯನ್‌ ಟೂರ್ನಿಯಲ್ಲಿ ಈ ಬಾರಿ ತಂಡದಿಂದ ಉತ್ತಮ ಪ್ರದರ್ಶನ ಹೊಮ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ. ಭಾರತ ತಂಡವನ್ನು ಏಷ್ಯಾದ ಶ್ರೇಷ್ಠತಂಡಗಳಲ್ಲಿ ಒಂದಾಗಿಸುವ ಆಸೆ ಅವರದಾಗಿದೆ’ ಎಂಬುದು ಈ ಬಾರಿಯ ಇಂಡಿಯನ್‌ ಸೂಪರ್‌ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಪರ ಗೆಲುವಿನ ಗೋಲು ಹೊಡೆದರಾಹುಲ್‌ ಭೆಕೆ ಅನಿಸಿಕೆ.

ಗೋವಾ ಫುಟ್‌ಬಾಲ್‌ ಕ್ಲಬ್‌ ಪರ ಆಡುವಬ್ರೆಂಡನ್‌ ಫರ್ನಾಂಡೀಸ್‌ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‘ಅನುಭವದ ಮೂಟೆ ಹೊತ್ತು ಸ್ಟಿಮ್ಯಾಚ್‌ ನಮ್ಮ ತಂಡ ಸೇರಿದ್ದಾರೆ. ಭಾರತ ತಂಡದ ಕೋಚ್‌ ಹುದ್ದೆಗೆ ಅವರು ಉತ್ತಮ ಆಯ್ಕೆ. ಆಟಗಾರರಿಂದ ಉತ್ತಮ ಪ್ರದರ್ಶನ ಬಯಸಿದ್ದಾರೆ’ ಎಂದು ನುಡಿದರು.

ಸ್ಟಿಮ್ಯಾಚ್‌ ಅವರು ಆಟಗಾರರಿಗೆ ಕೆಲವು ಫುಟ್‌ಬಾಲ್‌ ಕವಾಯತುಗಳೊಂದಿಗೆ ಫಿಟ್‌ನೆಸ್‌ ಪರೀಕ್ಷೆಯನ್ನು ನಡೆಸುತ್ತಿದ್ದು ಇದನ್ನು ಆಟಗಾರರು ತುಂಬ ಖುಷಿಯಿಂದಲೇ ಸ್ವೀಕರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT