ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ವರ್ಷದ ಜನವರಿ 17ರಂದು ಭಾರತ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವಣ ಟಿ20 ಪಂದ್ಯ ನಡೆಯಲಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 2023–24ರ ಸಾಲಿನಲ್ಲಿ ತವರಿನಲ್ಲಿ ನಡೆಯಲಿರುವ ಸರಣಿಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದೇ ಸೆಪ್ಟೆಂಬರ್‌ನಿಂದ ಮುಂದಿನ ವರ್ಷದ ಮಾರ್ಚ್‌ವರೆಗೆ ಆಸ್ಟ್ರೇಲಿಯಾ, ಅಫ್ಗಾನಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಭಾರತದಲ್ಲಿ ಸರಣಿಗಳನ್ನು ಆಡಲಿವೆ.ಅಕ್ಟೋಬರ್–ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಕೂಡ ನಡೆಯಲಿದೆ.

ಸೆಪ್ಟೆಂಬರ್ 22 ರಿಂದ 27ರವರೆಗೆ ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಮೊಹಾಲಿ, ಇಂದೋರ್ ಹಾಗೂ ರಾಜ್‌ಕೋಟ್‌ನಲ್ಲಿ ನಡೆಯಲಿವೆ. ನವೆಂಬರ್ 23 ರಿಂದ ಡಿಸೆಂಬರ್ ಮೂರರವರೆಗೆ ಭಾರತ–ಆಸ್ಟ್ರೇಲಿಯಾ ತಂಡಗಳು ಐದು ಟಿ20 ಪಂದ್ಯಗಳನ್ನು ವಿಶಾಖಪಟ್ಟಣ, ತಿರುವನಂತಪುರ, ಗುವಾಹಟಿ, ನಾಗಪುರ ಮತ್ತು ಹೈದರಾಬಾದ್‌ನಲ್ಲಿ ಆಡಲಿವೆ.

ಮುಂದಿನ ವರ್ಷ ಜನವರಿ 11 ರಿಂದ 17 ರವರೆಗೆ ಅಫ್ಗಾನಿಸ್ತಾನ ಎದುರು ಮೂರು ಟಿ20 ಪಂದ್ಯಗಳು ನಡೆಯಲಿವೆ. ಮೊಹಾಲಿ, ಇಂದೋರ್ ಮತ್ತು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿವೆ.

ಜನವರಿ ಕೊನೆಯ ವಾರದಲ್ಲಿ ಭಾರತ ಪ್ರವಾಸ ಕೈಗೊಳ್ಳಲ್ಲಿರುವ ಇಂಗ್ಲೆಂಡ್ ತಂಡವು ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಹೈದರಾಬಾದ್ (ಜ 25–29), ವಿಶಾಖಪಟ್ಟಣ (ಫೆ. 2–6), ರಾಜ್‌ಕೋಟ್ (ಫೆ 15–19), ರಾಂಚಿ (ಫೆ 23–27) ಮತ್ತು ಧರ್ಮಶಾಲಾ (ಮಾ.3ರಿಂದ 7) ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.