ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗೆ ಭಾರತ–ಪಾಕ್‌ ಸೆಣಸು

ಎಮರ್ಜಿಂಗ್‌ ಏಷ್ಯಾ ಕಪ್‌: ಸೆಮಿಯಲ್ಲಿ ಬಾಂಗ್ಲಾ ವಿರುದ್ಧ ಗೆಲುವು
Published 21 ಜುಲೈ 2023, 16:37 IST
Last Updated 21 ಜುಲೈ 2023, 16:37 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಬ್ಯಾಟಿಂಗ್‌ನಲ್ಲಿ ಎಡವಿದರೂ, ಪರಿಣಾಮಕಾರಿ ಬೌಲಿಂಗ್‌ ಮೂಲಕ ಬಾಂಗ್ಲಾದೇಶ ‘ಎ’ ತಂಡವನ್ನು ಸೆಮಿಫೈನಲ್‌ನಲ್ಲಿ 51 ರನ್‌ಗಳಿಂದ ಮಣಿಸಿದ ಭಾರತ ‘ಎ’ ತಂಡ, ಎಮರ್ಜಿಂಗ್‌ ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿತು.

ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ‘ಎ’ ಮತ್ತು ಪಾಕಿಸ್ತಾನ ‘ಎ’ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ದಿನದ ಮೊದಲ ಸೆಮಿಫೈನಲ್‌ನಲ್ಲಿ ಪಾಕ್‌ ತಂಡ, 60 ರನ್‌ಗಳಿಂದ ಶ್ರೀಲಂಕಾ ‘ಎ’ ತಂಡವನ್ನು ಮಣಿಸಿತು.

ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ‘ಎ’, 49.1 ಓವರ್‌ಗಳಲ್ಲಿ 211 ರನ್‌ಗಳಿಗೆ ಆಲೌಟಾಯಿತು. ಪ್ರಮುಖ ಬ್ಯಾಟರ್‌ಗಳು ವಿಫಲವಾದಾಗ ನಾಯಕ ಯಶ್‌ ಧುಲ್‌ (66 ರನ್‌, 85 ಎಸೆತ, 6 ಬೌಂ.) ಆಸರೆಯಾದರು. ಬ್ಯಾಟಿಂಗ್‌ ಕಷ್ಟಕರವಾಗಿದ್ದ ಪಿಚ್‌ನಲ್ಲಿ ಅವರು ತಾಳ್ಮೆಯ ಆಟವಾಡಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.

ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ‘ಎ’ ತಂಡ 34.2 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟಾಯಿತು. ಎಡಗೈ ಸ್ಪಿನ್ನರ್‌ ನಿಶಾಂತ್‌ ಸಿಂಧು (20ಕ್ಕೆ 5) ಮತ್ತು ಮಾನವ್‌ ಸುಥಾರ್‌ (32ಕ್ಕೆ 3) ಅವರು ಬಾಂಗ್ಲಾ ಪತನಕ್ಕೆ ಕಾರಣರಾದರು.

ಮೊಹಮ್ಮದ್‌ ನಯೀಮ್ (38 ರನ್) ಮತ್ತು ತಂಝಿದ್‌ ಹಸನ್ (51 ರನ್‌) ಮೊದಲ ವಿಕೆಟ್‌ಗೆ 70 ರನ್‌ ಸೇರಿಸಿ ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ನಯೀಮ್‌ ವಿಕೆಟ್‌ ಪಡೆದ ಸುಥಾರ್‌ ಈ ಜತೆಯಾಟ ಮುರಿದರು. ಆ ಬಳಿಕ ಸಂಧು ಅವರ ಕೈಚಳಕಕ್ಕೆ ಎದುರಾಳಿ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ಇನ್ನುಳಿದ 9 ವಿಕೆಟ್‌ಗಳು 90 ರನ್‌ಗಳಿಗೆ ಬಿದ್ದವು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: 49.1 ಓವರ್‌ಗಳಲ್ಲಿ 211 (ಸಾಯಿ ಸುದರ್ಶನ್ 21, ಅಭಿಷೇಕ್‌ ಶರ್ಮಾ 34, ನಿಕಿನ್‌ ಜೋಸ್‌ 17, ಯಶ್‌ ಧುಲ್‌ 66, ರಿಯಾನ್‌ ಪರಾಗ್‌ 12, ಮಾನವ್‌ ಸುಥಾರ್‌ 21, ರಾಜವರ್ಧನ್‌ ಹಂಗರ್ಗೇಕರ್‌ 15, ಮೆಹದಿ ಹಸನ್‌ 39ಕ್ಕೆ 2, ತಂಝೀಮ್‌ ಹಸನ್ 58ಕ್ಕೆ 2, ರಕೀಬುಲ್‌ ಹಸನ್‌ 36ಕ್ಕೆ 2)

ಬಾಂಗ್ಲಾದೇಶ ‘ಎ’: 34.2 ಓವರ್‌ಗಳಲ್ಲಿ 160 (ಮೊಹಮ್ಮದ್‌ ನಯೀಮ್ 38, ತಂಝಿದ್‌ ಹಸನ್ 51, ಸೈಫ್‌ ಹಸನ್ 22, ಮೆಹದಿ ಹಸನ್ 12, ನಿಶಾಂತ್‌ ಸಿಂಧು 20ಕ್ಕೆ 5, ಮಾನವ್‌ ಸುಥಾರ್ 32ಕ್ಕೆ 3) ಫಲಿತಾಂಶ: ಭಾರತ ‘ಎ’ ತಂಡಕ್ಕೆ 51 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT