‘ಸೋಮವಾರ ರಾತ್ರಿ ಇಲ್ಲಿಯ ಅಕ್ಬರ್ ರೆಸ್ಟೋರೆಂಟ್ನಲ್ಲಿ ಅಫ್ಗಾನಿಸ್ತಾನ ತಂಡದ ಕೆಲವು ಮೀಸಲು ಆಟಗಾರರು ಹೋಗಿದ್ದರು. ಅಲ್ಲಿದ್ದ ಒಬ್ಬ ಅವರನ್ನು ಮೊಬೈಲ್ನಲ್ಲಿ ರೆಕಾರ್ಡಿಂಗ್ ಮಾಡುತ್ತಿದ್ದ. ಅದನ್ನು ಆಟಗಾರರು ತಡೆಯಲು ಹೋದಾಗ ಮಾತಿನ ಚಕಮಕಿ ನಡೆದು ಪೊಲೀಸರು ವಾತಾವರಣ ತಿಳಿಗೊಳಿಸಿದರು. ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ ಎಂದು ಬಿಬಿಸಿ ವರದಿ ಮಾಡಿದೆ.