ಬ್ರಿಸ್ಟಲ್: ಚುಟುಕು ಕ್ರಿಕೆಟ್ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡದ ಗೆಲುವಿನ ಯಾತ್ರೆ ಮುಂದುವರಿಯಿತು. ಅಮನ್ಜೋತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಅವರ ಅರ್ಧ ಶತಕಗಳ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 24 ರನ್ಗಳಿಂದ ಸೋಲಿಸಿತು.

ಮಂಗಳವಾರ ರಾತ್ರಿ ನಡೆದ ಪಂದ್ಯ ಗೆಲ್ಲುವ ಮೂಲಕ ಹರ್ಮನ್ಪ್ರೀತ್ ಕೌರ್ ಪಡೆ ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಪಡೆಯಿತು. ಪ್ರವಾಸಿ ತಂಡ ಮೊದಲ ಪಂದ್ಯವನ್ನು ದಾಖಲೆಯ 97 ರನ್ಗಳಿಂದ ಗೆದ್ದುಕೊಂಡಿತ್ತು.

ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಸ್ಮೃತಿ ಮಂದಾನ (13), ಶಫಾಲಿ ವರ್ಮಾ (3) ಮತ್ತು ಹರ್ಮನ್ಪ್ರೀತ್ ಕೌರ್ (1) ಅವರು 5 ಓವರುಗಳಲ್ಲಿ 31 ರನ್ಗಳಾಗುಷ್ಟರಲ್ಲಿ ನಿರ್ಗಮಿಸಿದ್ದರು.

ಜೆಮಿಮಾ 41 ಎಸೆತಗಳಲ್ಲಿ 63 ರನ್ ಬಾರಿಸಿದರೆ, ಅಮನ್ಜೋತ್ (ಅಜೇಯ 63, 40ಎ) ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧ ಶತಕ ಗಳಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್ಗೆ 93 ರನ್ ಸೇರಿಸಿದ್ದರಿಂದ ತಂಡ 4 ವಿಕೆಟ್ಗೆ 181 ರನ್ಗಳ ಉತ್ತಮ ಮೊತ್ತ ಗಳಿಸಿತು.

ಇಂಗ್ಲೆಂಡ್ 7 ವಿಕೆಟ್ಗೆ 157 ರನ್ ಗಳಿಸಲಷ್ಟೇ ಶಕ್ತವಾಯಿತು.

ಸ್ಕೋರುಗಳು: ಭಾರತ: 20 ಓವರುಗಳಲ್ಲಿ 4 ವಿಕೆಟ್ಗೆ 181 (ಜೆಮಿಮಾ ರಾಡ್ರಿಗಸ್ 63, ಅಮನ್ಜೋತ್ ಕೌರ್ ಔಟಾಗದೇ 63, ರಿಚಾ ಘೋಷ್ ಔಟಾಗದೇ 32; ಲಾರೆನ್ ಬೆಲ್ 17ಕ್ಕೆ2); ಇಂಗ್ಲೆಂಡ್: 20 ಓವರುಗಳಲ್ಲಿ 7 ವಿಕೆಟ್ಗೆ 157 (ಟಾಮಿ ಬ್ಯೂಮಾಂಟ್ 54, ಆ್ಯಮಿ ಜೋನ್ಸ್ 32, ಸೋಫಿ ಎಕ್ಲೆಸ್ಟೋನ್ 35; ಶ್ರೀಚರಣಿ 28ಕ್ಕೆ2, ಅಮನ್ಜೋತ್ ಕೌರ್ 28ಕ್ಕೆ1). ಪಂದ್ಯದ ಆಟಗಾರ್ತಿ: ಅಮನ್ಜೋತ್ ಕೌರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.