ಮೆಲ್ಬರ್ನ್: ಕ್ರೀಡಾ ಲೋಕದಲ್ಲಿ ಪ್ರತಿನಿತ್ಯ ಒಂದಿಲ್ಲ ಒಂದು ದಾಖಲೆಗಳು ನಿರ್ಮಾಣಗೊಳ್ಳುತ್ತಿರುತ್ತವೆ. ಅದರಲ್ಲೂ ವಿಶೇಷವಾಗಿ ಕ್ರಿಕೆಟ್ನಲ್ಲಿ ಯಾವುದೇ ದಾಖಲೆಗಳು ಶಾಶ್ವತವಾಗಿರುವುದಿಲ್ಲ. ಇದೀಗ, ಮೆಲ್ಬರ್ನ್ ಕ್ರಿಕೆಟ್ ಮೈದಾನ (MCG)ದಲ್ಲಿ ಆರಂಭವಾಗಿರುವ ಆ್ಯಷಸ್ ಟೆಸ್ಟ್ನ 4ನೇ ಪಂದ್ಯದ ಮೊದಲ ದಿನ ಅತೀ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಹಾಜರಾಗುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಬಾಕ್ಸಿಂಗ್ ಡೇ ಆ್ಯಷಸ್ ಟೆಸ್ಟ್ ಪಂದ್ಯದ ಮೊದಲ ದಿನ ದಾಖಲೆಯ 93,442 ಕ್ರಿಕೆಟ್ ಅಭಿಮಾನಿಗಳು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಹಾಜರಿದ್ದರು. ಇದು ಟೆಸ್ಟ್ ಕ್ರಿಕೆಟ್ ಪಂದ್ಯ ಒಂದರಲ್ಲಿ ಒಂದೇ ದಿನ ಮೈದಾನದಲ್ಲಿ ಹಾಜರಿದ್ದ ಅತ್ಯಧಿಕ ಪ್ರೇಕ್ಷಕರ ಸಂಖ್ಯೆ.
.ಆ್ಯಷಸ್ ಟೆಸ್ಟ್: ಕಮಿನ್ಸ್ ದಾಳಿಗೆ ಕುಸಿದ ಇಂಗ್ಲೆಂಡ್.ಆ್ಯಷಸ್ ಸರಣಿಯ ಮೂರನೇ ಟೆಸ್ಟ್: ಹೆಡ್ ಶತಕ, ಒತ್ತಡದಲ್ಲಿ ಇಂಗ್ಲೆಂಡ್ .
2015ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೆಲ್ಬರ್ನ್ ಮೈದಾನದಲ್ಲೆ 93,013 ಪ್ರೇಕ್ಷಕರು ಭಾಗವಹಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.

ಎಂಸಿಜಿ ಮೈದಾನ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. 2023ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ದಿನ 91,112 ಪ್ರೇಕ್ಷಕರು ಹಾಜರಾಗಿದ್ದು, ಇದಕ್ಕೂ ಮೊದಲು ಟೆಸ್ಟ್ ಪಂದ್ಯ ಒಂದರಲ್ಲಿ, ಒಂದೇ ದಿನ ಹಾಜರಾದ ಅತ್ಯಧಿಕ ಪ್ರೇಕ್ಷಕರ ಸಂಖ್ಯೆಯಾಗಿತ್ತು.

ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಈಗಾಗಲೆ 3–0 ಅಂತರದ ಮುನ್ನಡೆಯೊಂದಿಗೆ ಸರಣಿಯನ್ನು ವಶಪಡಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.