ಅಡಿಲೇಡ್: ವೇಗಿ ಪ್ಯಾಟ್ ಕಮಿನ್ಸ್ ಅವರ ನಿಖರ ದಾಳಿಯ ಮುಂದೆ ಇಂಗ್ಲೆಂಡ್ ತಂಡವು ಕುಸಿಯಿತು.

ಇಲ್ಲಿ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ ಪಂದ್ಯದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್ ಹಿನ್ನಡೆಯ ಆತಂಕದಲ್ಲಿದೆ.

ಅಲೆಕ್ಸ್ ಕ್ಯಾರಿ ಶತಕ, ಉಸ್ಮಾನ್ ಖ್ವಾಜಾ ಮತ್ತು ಮಿಚೆಲ್ ಸ್ಟಾರ್ಕ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 91.2 ಓವರ್ಗಳಲ್ಲಿ 371 ರನ್ ಗಳಿಸಿತು. ಗುರುವಾರ ಅದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಕಮಿನ್ಸ್ (54ಕ್ಕೆ3) ಅವರ ದಾಳಿಗೆ ಆರಂಭದಲ್ಲಿಯೇ ಕುಸಿಯಿತು. ಕಮಿನ್ಸ್ ಅವರಿಗೆ ಸ್ಕಾಟ್ ಬೊಲ್ಯಾಂಡ್ (31ಕ್ಕೆ2) ಮತ್ತು ಸ್ಪಿನ್ನರ್ ನೇಥನ್ ಲಯನ್ (51ಕ್ಕೆ2) ಉತ್ತಮ ಬೆಂಬಲ ಕೊಟ್ಟರು. ಇದರಿಂದಾಗಿ ದಿನದಾಟದ ಅಂತ್ಯಕ್ಕೆಇಂಗ್ಲೆಂಡ್ ತಂಡವು 68 ಓವರ್ಗಳಲ್ಲಿ 8 ವಿಕೆಟ್ಗಳಿಗೆ 213 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್:ಆಸ್ಟ್ರೇಲಿಯಾ: 91.2 ಓವರ್ಗಳಲ್ಲಿ 371 (ಮಿಚೆಲ್ ಸ್ಟಾರ್ಕ್ 54, ಸ್ಕಾಟ್ ಬೋಲ್ಯಾಂಡ್ ಔಟಾಗದೇ 14, ಜೋಫ್ರಾ ಆರ್ಚರ್ 53ಕ್ಕೆ5, ಬ್ರೈಡನ್ ಕಾರ್ಸ್ 89ಕ್ಕೆ2, ವಿಲ್ ಜ್ಯಾಕ್ಸ್ 105ಕ್ಕೆ2)

ಇಂಗ್ಲೆಂಡ್: 68 ಓವರ್ಗಳಲ್ಲಿ 8ಕ್ಕೆ213 (ಬೆನ್ ಡಕೆಟ್ 29, ಹ್ಯಾರಿ ಬ್ರೂಕ್ 45, ಬೆನ್ ಸ್ಟೋಕ್ಸ್ ಬ್ಯಾಟಿಂಗ್ 45, ಜೆಮಿ ಸ್ಮಿತ್ 22, ಜೋಫ್ರಾ ಆರ್ಚರ್ ಬ್ಯಾಟಿಂಗ್ 30, ಪ್ಯಾಟ್ ಕಮಿನ್ಸ್ 31ಕ್ಕೆ2, ನೇಥನ್ ಲಯನ್ 51ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.