ಮೈಸೂರು: ವರುಣ್ ಪಟೇಲ್ ಅವರ ಅರ್ಧ ಶತಕ ಬಲದಿಂದ ಕರ್ನಾಟಕವು ಇಲ್ಲಿ ನಡೆಯುತ್ತಿರುವ ಕೂಚ್ ಬಿಹಾರ್ ಟ್ರೋಫಿ 19 ವರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಹಾರಾಷ್ಟ್ರ ವಿರುದ್ಧ ಅಲ್ಪ ಮುನ್ನಡೆ ಪಡೆಯಿತು.

ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಗುರುವಾರ ಮೂರನೇ ದಿನದಾಟ ಮುಂದುವರಿಸಿದ ಕರ್ನಾಟಕವು 104 ಓವರ್ಗಳಲ್ಲಿ 320 ರನ್ ಗಳಿಸಿ ಆಲೌಟ್ ಆಯಿತು.

ಎರಡನೇ ಇನಿಂಗ್ಸ್ ಆರಂಭಿಸಿದ ಮಹಾರಾಷ್ಟ್ರಕ್ಕೆ ಮಂಗಳೂರಿನ ವೇಗಿ ಈಸಾ ಹಕೀಮ್ ಪುತ್ತಿಗೆ (18ಕ್ಕೆ 3) ಅವರು ನಾಯಕ ಸಾಹಿಲ್ ಪಾರಕ್, ಶುಶ್ರುತ್ ಸಾವಂತ್ ಮತ್ತು ಸಂಕಿತ್ ಸುರಾನ ವಿಕೆಟ್ ಪಡೆದು ಆರಂಭಿಕ ಆಘಾತ ನೀಡಿದರು. ಎಡಗೈ ಸ್ಪಿನ್ನರ್ ಬಿ.ಆರ್.ರತನ್ ಎರಡು ವಿಕೆಟ್ ಪಡೆದು ಎದುರಾಳಿ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಮುರಿದರು.

ಮೂರನೇ ದಿನದಾಟದ ಅಂತ್ಯಕ್ಕೆ ಮಹಾರಾಷ್ಟ್ರ 59 ಓವರ್ಗಳಲ್ಲಿ 6ಕ್ಕೆ 176 ರನ್ ಗಳಿಸಿ 160 ರನ್ ಮುನ್ನಡೆ ಪಡೆದಿದೆ. ಆರ್ಕಮ್ ಸಯ್ಯದ್ (36), ಸ್ವಶಿಕ್ ಜಗತಾಪ್ (24) ಕ್ರೀಸ್ನಲ್ಲಿದ್ದಾರೆ. ಕಡೇ ದಿನದಾಟ ಬಾಕಿಯಿದ್ದು, ಪಂದ್ಯ ಕುತೂಹಲ ಘಟ್ಟದಲ್ಲಿದೆ.

ಸಂಕ್ಷಿಪ್ತ ಸ್ಕೋರ್:

ಮೊದಲ ಇನಿಂಗ್ಸ್: ಮಹಾರಾಷ್ಟ್ರ: 94.2 ಓವರ್ಗಳಲ್ಲಿ 304 ರನ್. ಕರ್ನಾಟಕ: 104 ಓವರ್ಗಳಲ್ಲಿ 320 ರನ್ (ಮಣಿಕಾಂತ್ ಶಿವಾನಂದ 71. ಸ್ವಶಿಕ್ ಜಗತಾಪ್ 93ಕ್ಕೆ 4). ಎರಡನೇ ಇನಿಂಗ್ಸ್: ಮಹಾರಾಷ್ಟ್ರ: 59 ಓವರ್ಗಳಲ್ಲಿ 6ಕ್ಕೆ 176 (ಆರ್ಕಮ್ ಸಯ್ಯದ್ ಔಟಾಗದೇ 36 ರನ್. ಈಸಾ ಹಕೀಮ್ ಪುತ್ತಿಗೆ 18ಕ್ಕೆ 3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.