ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AUS vs ENG: ಆ್ಯಷಸ್ ಟೆಸ್ಟ್ ಸರಣಿ ಕೈವಶದತ್ತ ಆಸ್ಟ್ರೇಲಿಯಾ ಕಣ್ಣು

ಸೋಲಿನ ಸರಪಳಿ ಕಳಚುವತ್ತ ರೂಟ್ ಬಳಗದ ಚಿತ್ತ
Last Updated 25 ಡಿಸೆಂಬರ್ 2021, 15:56 IST
ಅಕ್ಷರ ಗಾತ್ರ

ಮೆಲ್ಬರ್ನ್: ಸತತ ಎರಡು ಜಯಗಳಿಂದ ಆತ್ಮವಿಶ್ವಾಸದ ಆಗಸದಲ್ಲಿ ತೇಲಾಡುತ್ತಿರುವ ಆತಿಥೇಯ ಆಸ್ಟ್ರೇಲಿಯಾ ತಂಡವು ಭಾನುವಾರ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದು ಆ್ಯಷಸ್ ಸರಣಿಯನ್ನು ಕೈವಶ ಮಾಡಿಕೊಳ್ಳುವ ಛಲದಲ್ಲಿದೆ.

ಐದು ಪಂದ್ಯಗಳ ಸರಣಿಯನ್ನು ಜಯಿಸುವ ತನ್ನ ಕನಸು ಜೀವಂತವಾಗುಳಿಯಬೇಕಾದರೆ, ಇಂಗ್ಲೆಂಡ್ ತಂಡವು ಈ ಪಂದ್ಯದಲ್ಲಿ ಜಯಿಸುವ ಒತ್ತಡದಲ್ಲಿದೆ. ಆತಿಥೇಯ ತಂಡದ ಡೇವಿಡ್ ವಾರ್ನರ್, ಮಾರ್ನಸ್ ಲಾಬುಷೇನ್, ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅವರು ಅಮೋಘ ಲಯದಲ್ಲಿದ್ದಾರೆ. ಇಂಗ್ಲೆಂಡ್‌ನ ಅನುಭವಿ ಬೌಲಿಂಗ್ ಪಡೆಯನ್ನು ಕಳೆದೆರಡೂ ಪಂದ್ಯಗಳಲ್ಲಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ.

ಪ್ಯಾಟ್ ಕಮಿನ್ಸ್ ನಾಯಕತ್ವದ ಬೌಲಿಂಗ್ ಪಡೆಯೂ ತನ್ನ ಕೈಚಳಕ ಮೆರೆದಿದೆ. ಇಂಗ್ಲೆಂಡ್ ಬ್ಯಾಟಿಂಗ್ ಪಡೆಯನ್ನು ಅಪಾರವಾಗಿ ಕಾಡಿದ್ದಾರೆ. ಇದರ ನಡುವೆಯೂ ನಾಯಕ ಜೋ ರೂಟ್, ಡೇವಿಡ್ ಮಲಾನ್ ಒಂದಿಷ್ಟು ರನ್‌ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ತಂಡಕ್ಕೆ ಜಯ ಕೊಡಿಸುವಲ್ಲಿ ಅವರು ಸಫಲರಾಗಿಲ್ಲ. ಇದರಿಂದಾಗಿ ರೂಟ್ ನಾಯಕತ್ವವು ಬಹಳಷ್ಟು ಟೀಕೆಗೊಳಗಾಗಿದೆ. ಆದ್ದರಿಂದ ಈ ಪಂದ್ಯದಲ್ಲಿಕೆಲವು ಬದಲಾವಣೆಗಳೊಂದಿಗೆ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ತಂಡಗಳು
ಆಸ್ಟ್ರೇಲಿಯಾ:
ಪ್ಯಾಟ್ ಕಮಿನ್ಸ್ (ನಾಯಕ),ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್‌ ಲಾಬುಷೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕೆಮೆರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಸ್ಕಾಟ್ ಬೋಲಾಂಡ್, ಉಸ್ಮಾನ್‌ ಖ್ವಾಜಾ, ಮಿಚೆಲ್ ನೆಸೆರ್, ಜೇ ರಿಚರ್ಡ್ಸನ್, ಮಿಚೆಲ್ ಸ್ವಿಪ್ಸನ್.

ಇಂಗ್ಲೆಂಡ್: ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಹಸೀಬ್ ಹಮೀದ್, ಜ್ಯಾಕ್ ಕ್ರಾಲಿ, ಡೇವಿಡ್ ಮಲಾನ್, ಬೆನ್ ಸ್ಟೋಕ್ಸ್, ಜಾನಿ ಬೆಸ್ಟೊ, ಮಾರ್ಕ್ ವುಡ್, ಒಲಿ ರಾಬಿನ್ಸನ್, ಜ್ಯಾಕ್ ಲೀಚ್, ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಡಾಮ್ನಿಕ್ ಬೆಸ್, ಒಲಿ ಪೊಪ್, ರೊರಿ ಬರ್ನ್ಸ್, ಕ್ರೇಗ್ ಒವರ್ಟನ್, ಡೆನಿಯಲ್ ಲಾರೆನ್ಸ್.

ಪಂದ್ಯ ಆರಂಭ: ಬೆಳಿಗ್ಗೆ 5
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT