ಶನಿವಾರ, ಸೆಪ್ಟೆಂಬರ್ 21, 2019
21 °C
ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿ: ಕೊನೆಯ ವಿಕೆಟ್‌ಗೆ 73 ರನ್‌ ಸೇರಿಸಿದ ಬ್ಯಾಟ್ಸ್‌ಮನ್‌ಗಳು

ಆವೇಶ್ ಖಾನ್ ದಿಟ್ಟ ಆಟ: ಇಂಡಿಯಾ ರೆಡ್‌ಗೆ ‘ರೋಚಕ’ ಮುನ್ನಡೆ

Published:
Updated:
Prajavani

ಬೆಂಗಳೂರು: ಅಮೋಘ ಆಟವಾಡಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೊದಲ ಅರ್ಧಶತಕ ಗಳಿಸಿದ ಆವೇಶ್ ಖಾನ್ ಅವರು ಇಂಡಿಯಾ ರೆಡ್ ತಂಡಕ್ಕೆ ಒಂದು ರನ್ ಮುನ್ನಡೆ ಗಳಿಸಿಕೊಟ್ಟರು. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ದುಪೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಇಂಡಿಯಾ ರೆಡ್ ಮತ್ತು ಇಂಡಿಯಾ ಗ್ರೀನ್‌ ತಂಡಗಳ ನಡುವಿನ ಕೊನೆಯ ಲೀಗ್ ಪಂದ್ಯದಲ್ಲಿ ಡ್ರಾದಲ್ಲಿ ಮುಕ್ತಾಯಗೊಂಡಿತು. ಇದೇ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಫೈನಲ್ ಪಂದ್ಯದಲ್ಲೂ ಇವೆರಡು ತಂಡಗಳೇ ಮುಖಾಮುಖಿಯಾಗಲಿವೆ.

ಆವೇಶ್ ಖಾನ್ (64; 56 ಎಸೆತ, 7 ಸಿಕ್ಸರ್‌, 2 ಬೌಂಡರಿ) ಮತ್ತು ಸಂದೀಪ್ ವಾರಿಯರ್ (5; 40 ಎಸೆತ) ಕೊನೆಯ ವಿಕೆಟ್‌ಗೆ 73 ರನ್ ಸೇರಿಸಿ ತಂಡವನ್ನು ಕಾಪಾಡಿದರು. ಈ ಮೂಲಕ ತಂಡ 441 ರನ್‌ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ಇಂಡಿಯಾ ಗ್ರೀನ್ 440 ರನ್‌ ಗಳಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಇಂಡಿಯಾ ಗ್ರೀನ್ 3ಕ್ಕೆ 98 ರನ್ ಗಳಿಸಿದ್ದಾಗ ಪಂದ್ಯವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು. ಮೂರನೇ ದಿನದಾಟದ ಮುಕ್ತಾಯಕ್ಕೆ 9 ವಿಕೆಟ್ ಕಳೆದುಕೊಂಡು 404 ರನ್‌ ಗಳಿಸಿದ್ದ ರೆಡ್ ತಂಡ ಸಂಕಷ್ಟಕ್ಕೆ ಈಡಾಗಿತ್ತು. ಆದರೆ ಭಾನುವಾರ ಪಂದ್ಯದ ಗತಿಯೇ ಬದಲಾಯಿತು.

ರೆಡ್‌ ತಂಡ ಆರು ಪಾಯಿಂಟ್‌ಗಳೊಂದಿಗೆ ಫೈನಲ್ ಪ್ರವೇಶಿಸಿತು. ಪಾಯಿಂಟ್ ಪಟ್ಟಿಯಲ್ಲಿ ಇಂಡಿಯಾ ಬ್ಲೂ ಜೊತೆ ಎರಡನೇ ಸ್ಥಾನ ಹಂಚಿಕೊಂಡರೂ ಗ್ರೀನ್ ತಂಡ ಉತ್ತಮ ರನ್‌ರೇಟ್ ಆಧಾರದಲ್ಲಿ ಫೈನಲ್ ಪ್ರವೇಶಿಸಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಡಿಯಾ ಗ್ರೀನ್‌: 131.3 ಓವರ್‌ಗಳಲ್ಲಿ 440; ಇಂಡಿಯಾ ರೆಡ್‌:145.3 ಓವರ್‌ಗಳಲ್ಲಿ 441 (ಆವೇಶ್ ಖಾನ್‌ 64;ಧರ್ಮೇಂದ್ರ ಜಡೇಜ 135ಕ್ಕೆ4, ಅಂಕಿತ್ ರಜಪೂತ್ 71ಕ್ಕೆ3); ದ್ವಿತೀಯ ಇನಿಂಗ್ಸ್‌, ಇಂಡಿಯಾ ಗ್ರೀನ್‌: 54 ಓವರ್‌ಗಳಲ್ಲಿ 3ಕ್ಕೆ98 (ಧ್ರುವ ಶೋರೆ 44). ಫಲಿತಾಂಶ: ಪಂದ್ಯ ಡ್ರಾ; ಪಾಯಿಂಟ್ಸ್‌: ಇಂಡಿಯಾ ರೆಡ್‌ 3, ಇಂಡಿಯಾ ಗ್ರೀನ್‌ 1.

Post Comments (+)