ಗುರುವಾರ , ಫೆಬ್ರವರಿ 20, 2020
22 °C

ಸಿಎಬಿಗೆ ಅಭಿಷೇಕ್ ದಾಲ್ಮಿಯಾ ಅಧ್ಯಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಬಂಗಾಳ ಕ್ರಿಕೆಟ್ ಸಂಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಅಭಿಷೇಕ್ ದಾಲ್ಮಿಯಾ ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ನಡೆದ ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ  38 ವರ್ಷದ ಅಭಿಷೇಕ್ ಅವರನ್ನು ನೇಮಕ ಮಾಡಲಾಯಿತು. ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ನಂತರ ಈ ಸ್ಥಾನ ತೆರವಾಗಿತ್ತು.

ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅಭಿಷೇಕ್ ಅವರು 2021ರ ನವೆಂಬರ್ 6ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶ ವಿದೆ. ಅದರ ನಂತರ ಅವರು ಕೂಲಿಂಗ್ ಆಫ್ (ವಿರಾಮ) ನಿಯಮಕ್ಕೆ ಒಳಪಡಲಿದ್ದಾರೆ. ಸಿಎಬಿಗೆ ಅವರು 18ನೇ ಅಧ್ಯಕ್ಷರಾಗಿದ್ದಾರೆ.

ಸೌರವ್ ಅವರ ಅಣ್ಣ, ಹಿರಿಯ ಕ್ರಿಕೆಟಿಗ ಸ್ನೇಹಾಶಿಶ್ ಗಂಗೂಲಿ ಅವರು ನೂತನ  ಕಾರ್ಯದರ್ಶಿಯಾಗಿ ನೇಮಕವಾದರು.

ಬುಧವಾರ ಸಂಜೆಯ ವಿಮಾನದಲ್ಲಿ ಮಗಳೊಂದಿಗೆ ಇಂಗ್ಲೆಂಡ್‌ಗೆ ತೆರಳಲು ಸಿದ್ಧರಾಗಿದ್ದ ಸೌರವ್ ಅವರೂ ಸಿಎಬಿಗೆ ಆಗಮಿಸಿ ಅಭಿಷೇಕ್ ಮತ್ತು ಸ್ನೇಹಾಶಿಶ್ ಅವರನ್ನು ಅಭಿನಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು