ಪಾಕ್ ಕ್ರಿಕೆಟಿಗರಿಗೆ ಕೇಂದ್ರ ಗುತ್ತಿಗೆ

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 20 ಆಟಗಾರರಿಗೆ ಕೇಂದ್ರ ಗುತ್ತಿಗೆ ನೀಡಿದೆ. ವಾರ್ಷಿಕ ವೇತನದಲ್ಲಿ ಶೇ 25ರಷ್ಟು ಹೆಚ್ಚಳ ಮಾಡಿದೆ.
ಪಾಕ್ ತಂಡದ ನಾಯಕ, ಬ್ಯಾಟ್ಸ್‌ಮನ್ ಬಾಬರ್ ಅಜಂ, ಹಸನ್ ಅಲಿ, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಶಾ ಆಫ್ರಿದಿ ಅವರಿಗೆ ಅತ್ಯುನ್ನತ ‘ಎ‘ ದರ್ಜೆ ನೀಡಲಾಗಿದೆ. ಅನುಭವಿ ಆಟಗಾರರಾದ ಮೊಹಮ್ಮದ್ ಹಫೀಜ್ ಮತ್ತು ಹ್ಯಾರಿಸ್ ಸೊಹೈಲ್ ಅವರನ್ನು ಪಟ್ಟಿಯಿಂದಲೇ ಕೈಬಿಡಲಾಗಿದೆ.
ಪಟ್ಟಿ ಇಂತಿದೆ
ಎ ದರ್ಜೆ: ಬಾಬರ್ ಆಜಂ, ಹಸನ್ ಅಲಿ, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಆಫ್ರಿದಿ.
ಬಿ ದರ್ಜೆ: ಅಜರ್ ಅಲಿ, ಫಾಹೀಂ ಅಶ್ರಫ್, ಫಕ್ರ್ ಜಮಾನ್, ಫವಾದ್ ಆಲಂ, ಶಾದಾಬ್ ಖಾನ್, ಯಾಸೀರ್ ಶಾ.
ಸಿ ದರ್ಜೆ: ಅಬಿದ್ ಅಲಿ, ಇಮಾಮ್ ಉಲ್ ಹಕ್, ಹ್ಯಾರಿಸ್ ರವೂಫ್, ಮೊಹಮ್ಮದ್ ಹಸನೈನ್, ಮೊಹಮ್ಮದ್ ನವಾಜ್, ನೂಮನ್ ಅಲಿ, ಸರ್ಫರಾಜ್ ಅಹಮದ್
ಉದಯೋನ್ಮುಖರು: ಇಮ್ರಾನ್ ಬಟ್, ಶಾನವಾಜ್ ದಹಾನಿ, ಉಸ್ಮಾನ್ ಖಾದೀರ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.