ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ; ಬ್ಯಾರಿಂಗ್ಟನ್ ಅಬ್ಬರ: ಸ್ಕಾಟ್ಲೆಂಡ್‌ಗೆ ಜಯ

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಪ್ರಾಥಮಿಕ ಸುತ್ತು
Last Updated 19 ಅಕ್ಟೋಬರ್ 2021, 16:13 IST
ಅಕ್ಷರ ಗಾತ್ರ

ಅಲ್‌ ಅಮೆರತ್ (ಪಿಟಿಐ): ರಿಚಿ ಬ್ಯಾರಿಂಗ್ಟನ್ ಅಬ್ಬರದ ಬ್ಯಾಟಿಂಗ್ ಬಲದಿಂದ ಸ್ಕಾಟ್ಲೆಂಡ್ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಾಥಮಿಕ ಸುತ್ತಿನಲ್ಲಿ ಜಯ ಸಾಧಿಸಿತು.

ಮಂಗಳವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವು 17 ರನ್‌ಗಳಿಂದ ಪಪುವಾ ನ್ಯೂಗಿನಿ ವಿರುದ್ಧ ಜಯಿಸಿತು. ಟೂರ್ನಿಯಲ್ಲಿ ತಂಡಕ್ಕೆ ಇದು ಎರಡನೇ ಜಯ. ನಾಲ್ಕು ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.

ಟಾಸ್ ಗೆದ್ದ ಸ್ಕಾಟ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಜೋಡಿ ಮುನ್ಸಿ (15) ಮತ್ತು ನಾಯಕ ಕೊಯಿಜೆರ್ (6) ಎಡವಿದರು. ಆದರೆ, ಮ್ಯಾಥ್ಯೂ ಕ್ರಾಸ್ (45;36ಎ, 2ಬೌಂಡರಿ, 2ಸಿಕ್ಸರ್) ಮತ್ತು ರಿಚಿ ಬ್ಯಾರಿಂಗ್ಟನ್ (70;49ಎಸೆತ, 6ಬೌಂಡರಿ, 3ಸಿಕ್ಸರ್) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 92 ರನ್ ಸೇರಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 165 ರನ್‌ಗಳನ್ನು ಗಳಿಸಿತು. ನ್ಯೂಗಿನಿ ತಂಡದ ಕಬುವಾ ಮೊರಿಯಾ (31ಕ್ಕೆ4) ಮತ್ತು ಶಾಡ್ ಸೊಪರ್ (24ಕ್ಕೆ3) ಉತ್ತಮ ಬೌಲಿಂಗ್ ಮಾಡಿದರು.

ಗುರಿ ಬೆನ್ನಟ್ಟಿದ ನ್ಯೂಗಿನಿ ತಂಡವು 19.3 ಓವರ್‌ಗಳಲ್ಲಿ 148 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸ್ಕಾಟ್ಲೆಂಡ್‌ ತಂಡದ ಜೋಶ್ ಡೆವ್ಲಿ (18ಕ್ಕೆ4) ಉತ್ತಮಬೌಲಿಂಗ್ ಮಾಡಿದರು. ನ್ಯೂಗಿನಿ ತಂಡದ ನಾರ್ಮನ್ ವನುವ (47 ರನ್) ಮಾಡಿದ ಹೋರಾಟ ಫಲ ನೀಡಲಿಲ್ಲ.

ಸಂಕ್ಷಿಪ್ತ ಸ್ಕೋರು: ಸ್ಕಾಟ್ಲೆಂಡ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 165 (ಮ್ಯಾಥ್ಯೂ ಕ್ರಾಸ್ 45, ರಿಚಿ ಬ್ಯಾರಿಂಗ್ಟನ್ 70, ಕಬುವಾ ಮೊರಿಯಾ 31ಕ್ಕೆ4, ಶಾಡ್ ಸೊಪರ್ 24ಕ್ಕೆ3), ಪಪುವಾ ನ್ಯೂಗಿನಿ: 19.3 ಓವರ್‌ಗಳಲ್ಲಿ 148 (ಸೆಸೆ ಬಾವು 24, ನಾರ್ಮನ್ ವಾನುವ 47, ಕಿಪ್ಲಿನ್ ಡೊರಿಗಾ 18, ಶಾಡ್ ಸೊಪರ್ 16, ಜೋಶ್ ಡೇವಿ18ಕ್ಕೆ4) ಫಲಿತಾಂಶ: ಸ್ಕಾಟ್ಲೆಂಡ್ ತಂಡಕ್ಕೆ 17 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT