ಶನಿವಾರ, ಜನವರಿ 18, 2020
25 °C

ನಕಲಿ ದಾಖಲೆ: ಕಾಲ್ರಾಗೆ 1 ವರ್ಷ ನಿಷೇಧ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಕಲಿ ದಾಖಲೆ ಮೂಲಕ ಕಡಿಮೆ ವಯಸ್ಸು ತೋರಿಸಿದ ಯುವ ಎಡಗೈ ಬ್ಯಾಟ್ಸ್‌ಮನ್‌ ಮಂಜೋತ್‌ ಕಾಲ್ರಾ ಅವರಿಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ (ಡಿಡಿಸಿಎ) ನಿರ್ಗಮಿತ ಒಂಬುಡ್ಸ್‌ಮನ್‌ ಅವರು ರಣಜಿ ಟ್ರೋಫಿ ಪಂದ್ಯಗಳನ್ನು ಆಡುವುದರಿಂದ ಒಂದು ವರ್ಷ ನಿಷೇಧ ಹೇರಿದ್ದಾರೆ.

ಕಾಲ್ರಾ 16 ವರ್ಷ ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ಆಡುವ ಸಂದರ್ಭದಲ್ಲಿ ನೈಜ ವಯಸ್ಸನ್ನು ಮರೆಮಾಚಿದ ಆರೋಪ ಎದುರಿಸುತ್ತಿದ್ದಾರೆ. 

2018ರಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನ ಫೈನಲ್‌ನಲ್ಲಿ ಶತಕ ಬಾರಿಸಿ ಕಾಲ್ರಾ ಗಮನ ಸೆಳೆದಿದ್ದರು. ಆದರೆ ಇಂಥದ್ದೇ ಆರೋಪ ಎದುರಿಸುತ್ತಿರುವ ದೆಹಲಿ ತಂಡದ ಉಪನಾಯಕ ನಿತೀಶ್‌ ರಾಣಾ ಅವರಿಗೆ ವಿನಾಯಿತಿ ನೀಡಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು