‘ಗೆಲುವಿಗೆ ನೆರವಾದ ಬೂಮ್ರಾ ಅಲಭ್ಯತೆ’
‘ವೇಗದ ಬೌಲರ್‌ಗಳಿಗೆ ಸ್ನೇಹಿಯಾಗಿದ್ದ ಸಿಡ್ನಿ ಪಿಚ್‌ನಲ್ಲಿ ಅಂತಿಮ ಟೆಸ್ಟ್‌ನ ಮೂರನೇ ದಿನ ಅಗ್ರ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಬೌಲಿಂಗ್‌ಗೆ ಇಳಿಯದಿದ್ದುದು ತಮ್ಮ ತಂಡದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿತು’ ಎಂದು ಆಸ್ಟ್ರೇಲಿಯಾದ ಬ್ಯಾಟರ್‌ಗಳಾದ ಉಸ್ಮಾನ್ ಖ್ವಾಜಾ ಮತ್ತು ಟ್ರಾವಿಸ್ ಹೆಡ್ ಒಪ್ಪಿಕೊಂಡಿದ್ದಾರೆ.
ಬೆನ್ನಿನ ಕೆಳಭಾಗದ ನೋವಿನಿಂದಾಗಿ ಬೂಮ್ರಾ ಐದನೇ ಕ್ರಿಕೆಟ್ ಟೆಸ್ಟ್‌ನ ಮೂರನೇ ದಿನ ಬೌಲಿಂಗ್ ಮಾಡಿರಲಿಲ್ಲ.
ಈ ಸರಣಿಯಲ್ಲಿ ಬೂಮ್ರಾ ಬೌಲಿಂಗ್‌ನಲ್ಲಿ ಖ್ವಾಜಾ ಆರು ಬಾರಿ ಔಟ್ ಆಗಿದ್ದರು. ‘ಪ್ರತಿ ಬಾರಿ ನಾನು ಹೊಸ ಚೆಂಡಿನಲ್ಲಿ ಈ ವ್ಯಕ್ತಿಯನ್ನು ನಿಭಾಯಿಸಬೇಕಾಗುತಿತ್ತು. ಅದು ತುಂಬಾ ಕಠಿಣ ಕೆಲಸ’ ಎಂದು ಖ್ವಾಜಾ ಹೇಳಿದರು.