ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಮೂಡಿಸಿದ ಎಂ.ಎಸ್. ಧೋನಿ ಫೇಸ್‌ಬುಕ್ ಪೋಸ್ಟ್‌

ಚೆನ್ನೈ ತಂಡಕ್ಕೆ ಐದು ಬಾರಿ ಕಪ್ ಗೆದ್ದುಕೊಟ್ಟಿರುವ ಧೋನಿ ‍ಪೋಸ್ಟ್‌ ಬಗ್ಗೆ ಚರ್ಚೆ
Published 5 ಮಾರ್ಚ್ 2024, 3:18 IST
Last Updated 5 ಮಾರ್ಚ್ 2024, 3:18 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನೇನು 2024 ನೇ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಪ್ರಾರಂಭವಾಗಿದ್ದು, ಇದೇ 22ರಿಂದ ಐಪಿಎಲ್ ‍ಪಂದ್ಯಗಳು ಶುರುವಾಗಲಿವೆ.

ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್‌ ಆಟಗಾರ ಎಂ.ಎಸ್. ಧೋನಿ ಅವರು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್ ಒಂದು ಗಮನ ಸೆಳೆದಿದೆ.

‘ಕಾಯಲಾಗುತ್ತಿಲ್ಲ, ಈ ಹೊಸ ಸೀಸನ್‌ಗೆ ಮತ್ತು ಬರಲಿರುವ ನನ್ನ ಹೊಸ ಜವಾಬ್ದಾರಿಗೆ’, ಕಾಯುತ್ತಾ ಇರೀ.. (Can't wait for the new season and the new 'role'. Stay tuned!) ಎಂದು ಬರೆದುಕೊಂಡಿದ್ದಾರೆ.

ಕಳೆದ ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಧೋನಿ ಅವರ ಈ ಪೋಸ್ಟ್ ಸಾಕಷ್ಟು ಗಮನ ಸೆಳೆದಿದ್ದು ಈ ಐಪಿಎಲ್‌ನಲ್ಲಿ ಧೋನಿ ಅವರ ಪಾತ್ರ ಏನಾಗಿರಲಿದೆ? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಕಳೆದ ವರ್ಷ ಐಪಿಎಲ್‌ನಿಂದ ನಿವೃತ್ತಿಯಾಗುವ ಸೂಚನೆಯನ್ನು ಧೋನಿ ನೀಡಿದ್ದರು. ಅಲ್ಲದೇ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.

ಧೋನಿ ಅವರು ಚೆನ್ನೈ ತಂಡಕ್ಕೆ ಕೋಚ್ ಆಗಬಹುದು ಅಥವಾ ಮೆಂಟರ್ ಆಗಬಹುದು ಎಂದು ಹಲವರು ಹೇಳಿದ್ದರೆ, ಧೋನಿ ಅವರೇ ಚೆನ್ನೈ ತಂಡಕ್ಕೆ ಹೊಸ ನಾಯಕನನ್ನು ಘೋಷಣೆ ಮಾಡಲಿದ್ದಾರೆ ಎಂದು ಕೆಲವರು ಹೇಳಿದ್ದಾರೆ.

ಇನ್ನೂ ಕೆಲವರು ಧೋನಿ ಅವರು ಈ ಐಪಿಎಲ್‌ನಲ್ಲೂ ಆಡಬಹುದು ಎಂದು ಅವರ ಫೇಸ್‌ಬುಕ್ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.

2008ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿರುವ ಧೋನಿ ಅವರು, ಆಗಿನಿಂದಲೂ ಚೆನ್ನೈ ತಂಡದ ಜೊತೆ ಗುರುತಿಸಿಕೊಂಡಿದ್ದಾರೆ. 250 ಐಪಿಎಲ್ ಪಂದ್ಯಗಳನ್ನು ಆಡಿರುವ ಅವರು 5,082 ರನ್ ಹೊಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT