ಬೆಂಗಳೂರು: ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ತಂಡಗಳು ಪೈಪೋಟಿ ನಡೆಸಲಿರುವ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯು ಬುಧವಾರ ಆರಂಭವಾಗಲಿದೆ.
ಆತಿಥೇಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ನಾಲ್ಕು ತಂಡಗಳನ್ನು ಕಣಕ್ಕಿಳಿಸುತ್ತಿದೆ. ಅದರಲ್ಲಿ ಕರ್ನಾಟಕ ಇಲೆವನ್ ತಂಡಕ್ಕೆ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಅವರಿಗೆ ನಾಯಕತ್ವ ನೀಡಲಾಗಿದೆ. ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್ ತಂಡಕ್ಕೆ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ.
ಒಟ್ಟು 16 ತಂಡಗಳು ಕಣದಲ್ಲಿವೆ. ನಾಲ್ಕು ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಗಿದೆ. ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿಯು ನಡೆಯಲಿದೆ. ದೀರ್ಘ ಮಾದರಿ ಪಂದ್ಯಗಳು (ನಾಲ್ಕು ದಿನ) ನಡೆಯಲಿವೆ. ಫೈನಲ್ ಪಂದ್ಯವು ಸೆ 24 ರಿಂದ 27ರವರೆಗೆ ಆಯೋಜನೆಯಾಗಿದೆ. ಪಂದ್ಯಗಳು ಬೆಳಿಗ್ಗೆ 9.30ಕ್ಕೆ ಆರಂಭವಾಗಲಿವೆ.
ಕೆಎಸ್‌ಸಿಎ ಇಲೆವನ್: ಮನೀಷ್ ಪಾಂಡೆ (ನಾಯಕ), ಜೆ. ನಿಕಿನ್ ಜೋಸ್, ಎಲ್.ಆರ್. ಚೇತನ್, ಕೆ.ವಿ. ಅನೀಶ್, ಆರ್. ಸ್ಮರಣ್, ಅಕ್ಷನ್ ಎಸ್ ರಾವ್, ಶರತ್ ಶ್ರೀನಿವಾಸ್ (ವಿಕೆಟ್‌ಕೀಪರ್), ಹಾರ್ದಿಕ್ ರಾಜ್, ವಿದ್ಯಾಧರ್ ಪಾಟೀಲ, ವಿ. ಕೌಶಿಕ್, ಆದಿತ್ಯ ನಾಯರ್, ಮೊಹಸೀನ್ ಖಾನ್, ಸಂತೋಕ್ ಸಿಂಗ್, ರೋಹಿತ್ ಕುಮಾರ್ ಎಸಿ,, ಸಂಜಯ್ ಅಶ್ವಿನ್ (ವಿಕೆಟ್‌ಕೀಪರ್). ಕೋಚ್: ಯರೇಗೌಡ
ಕೆಎಸ್‌ಸಿಎ ಅಧ್ಯಕ್ಷರ ಇಲೆವನ್: ಅನೀಶ್ವರ್ ಗೌತಮ್ (ನಾಯಕ), ಮೆಕ್ನಿಲ್ ಎಚ್. ನರೋನಾ, ಎಸ್.ಎಚ್. ನರೋನಾ, ಅಭಿನವ್ ಮನೋಹರ್, ಸುಜಯ್ ಎಸ್. ಸತೇರಿ (ವಿಕೆಟ್‌ಕೀಪರ್), ಮನೋಜ್ ಭಾಂಡಗೆ, ವರುಣ್ ರಾವ್ ಟಿ.ಎನ್., ಪಾರಸ್ ಗುರುಭಕ್ಷ್ ಆರ್ಯ, ಮೋನಿಷ್ ರೆಡ್ಡಿ, ರಾಜವೀರ್ ವಾದ್ವಾ, ಎಲ್. ಮನ್ವಂತ್ ಕುಮಾರ್, ಬಿ.ಎನ್. ಯಶ್ವಂತ್, ಬಿ.ಯು. ಶಿವಕುಮಾರ್, ಅಭಿಷೇಕ್ ಪ್ರಭಾಕರ್. ಕೋಚ್: ಸೋಮಶೇಖರ್ ಶಿರಗುಪ್ಪಿ.
ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: ಶ್ರೇಯಸ್ ಗೋಪಾಲ್ (ನಾಯಕ), ರೋಹನ್ ಎ ಪಾಟೀಲ, ವಿಶಾಲ್ ಓನತ್, ಕಿಶನ್ ಬೆದರೆ, ಅರ್ಸಲನ್ ಕೃಷ್ಣ (ವಿಕೆಟ್‌ಕೀಪರ್), ಯಶೋವರ್ಧನ್ ಪರಂತ್ ಎಪಿ. ಅಭಿಲಾಷ್ ಶೆಟ್ಟಿ, ಶಿಖರ್ ಶೆಟ್ಟಿ, ಅಧೋಕ್ಷ ಹೆಗಡೆ, ಎಲ್.ಆರ್. ಕುಮಾರ್, ಇ.ಜೆ. ಜಸ್ಪರ್, ಆದಿತ್ಯ ಗೋಯಲ್, ನಿಶ್ಚಿತಾ ಎನ್. ರಾವ್, ಕೆ.ಎಲ್. ಶ್ರೀಜಿತ್ , ಲವನೀತ್ ಸಿಸೊಡಿಯಾ (ಇಬ್ಬರೂ ವಿಕೆಟ್‌ಕೀಪರ್). ಕೋಚ್: ಮನ್ಸೂರ್ ಅಲಿ ಖಾನ್.
ಕೆಎಸ್‌ಸಿಎ ಕೋಲ್ಟ್ಸ್: ಶುಭಾಂಗ್ ಹೆಗ್ಡೆ (ನಾಯಕ), ಆರ್.ವಿ. ರೋಹಿತ್, ಹರ್ಷಿಲ್ ಧರ್ಮಾನಿ, ಸಮಿತ್ ದ್ರಾವಿಡ್, ಕೆ.ಪಿ. ಕಾರ್ತಿಕೇಯ, ಧೀರಜ್ ಗೌಡ, ಧ್ರುವ ಪ್ರಭಾಕರ್, ಸಮರ್ಥ್ ನಾಗರಾಜ್, ಧನುಷ್ ಗೌಡ, ನಿಶ್ಚಿತ್ ಪೈ, ಯುವರಾಜ್ ಅರೋರಾ, ಕೃಷಿವ್ ಬಜಾಜ್ (ಇಬ್ಬರೂ ವಿಕೆಟ್‌ಕೀಪರ್), ಎಂ.ಬಿ. ಶಿವಂ, ಮಾಧವ್ ಧಾರವಾಡಕರ್, ಎಸ್. ಇಶಾನ್. ಕೋಚ್: ಕುನಾಲ್ ಕಪೂರ್.
ಐಎಎಫ್, ಆರ್‌ಎಸ್‌ಐ, ಕಿಣಿ ಸ್ಪೋರ್ಟ್ಸ್(ಬೆಂಗಳೂರು), ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣ, ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಮೈಸೂರು. ಎಸ್‌ಜೆಸಿಎ ಮೈಸೂರು.
ಎ ಝೋನ್: ಕೆಎಸ್‌ಸಿಎ ಇಲೆವನ್, ಗೋವಾ, ಮಧ್ಯಪ್ರದೇಶ, ಛತ್ತೀಸಗಢ
ಬಿ ಝೋನ್: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್, ತಮಿಳುನಾಡು. ವಿದರ್ಭ, ಮಹಾರಾಷ್ಟ್ರ.
ಸಿ ಝೋನ್: ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್, ಮುಂಬೈ, ಆಂಧ್ರ. ಗುಜರಾತ್
ಡಿ ಝೋನ್: ಕೆಎಸ್‌ಸಿಎ ಕೋಲ್ಟ್ಸ್, ಬರೋಡಾ, ಡಾ. ಡಿವೈ ಪಾಟೀಲ ಸಿಎ, ಒಡಿಶಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.