ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿಲ್ ಗಾವಸ್ಕರ್ ಪದಾರ್ಪಣೆ ಸುವರ್ಣ ಮಹೋತ್ಸವಕ್ಕೆ ಎಂಸಿಎ ಚಿತ್ತ

Last Updated 14 ಆಗಸ್ಟ್ 2020, 11:04 IST
ಅಕ್ಷರ ಗಾತ್ರ

ಮುಂಬೈ: ದಿಗ್ಗಜ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಟೆಸ್ಟ್ ಪದಾರ್ಪಣೆ ಮಾಡಿ ಮುಂದಿನ ವರ್ಷಕ್ಕೆ 50 ವರ್ಷವಾಗಲಿದೆ. ಈ ನೆನಪಿಗೆ ಸುವರ್ಣ ಮಹೋತ್ಸವ ಆಚರಿಸಲು ಮುಂಬೈ ಕ್ರಿಕೆಟ್ ಸಂಸ್ಥೆಯು ಯೋಜನೆ ರೂಪಿಸಿದೆ.

1971ರಲ್ಲಿ ಸುನಿಲ್, ಪೋರ್ಟ್ ಆಫ್‌ ಸ್ಪೇನ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದೇ 18ರಂದು ನಡೆಯಲಿರುವ ಎಂಸಿಎ ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ಈ ಯೋಜನೆಯನ್ನು ಮಂಡಿಸಲಾಗುತ್ತಿದೆ.

71 ವರ್ಷದ ಗಾವಸ್ಕರ್ ಅವರು ಮುಂಬೈನವರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ರನ್‌ಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಅವರದ್ದು. ಒಟ್ಟು 125 ಟೆಸ್ಟ್‌ಗಳನ್ನು ಆಡಿರುವ ಅವರು 10,122 ರನ್‌ ಗಳಿಸಿದ್ದಾರೆ. ಅದರಲ್ಲಿ 34 ಶತಕಗಳು ಇವೆ.

108 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನೂ ಆಡಿರುವ ಗಾವಸ್ಕರ್, 3092 ರನ್‌ಗಳನ್ನು ಕಲೆಹಾಕಿದ್ದಾರೆ. ನಿವೃತ್ತಿಯ ನಂತರ ವೀಕ್ಷಕ ವಿವರಣೆಗಾರನಾಗಿ ಖ್ಯಾತರಾಗಿದ್ದಾರೆ.

ಅಪೆಕ್ಸ್‌ ಕೌನ್ಸಿಲ್ ಸಭೆಯಲ್ಲಿ ಅಂಕಿತ್ ಚವ್ಹಾಣ್ ಮೇಲಿನ ಆಜೀವ ನಿಷೇಧ ವಿಷಯವೂ ಪ್ರಸ್ತಾಪವಾಗುವ ಸಾಧ್ಯತೆ ಇದೆ.2013ರ ಐಪಿಎಲ್‌ನಲ್ಲಿ ನಡೆದಿದ್ದ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಅಂಕಿತ್ ಸಿಕ್ಕಿಬಿದ್ದಿದ್ದರು. ಆಗ ಅವರ ಮೇಲೆ ಆಜೀವ ನಿಷೇಧ ವಿಧಿಸಲಾಗಿತ್ತು. ತಮ್ಮ ಮೇಲಿನ ನಿಷೇಧವನ್ನು ಕಡಿತಗೊಳಿಸಬೇಕು ಎಂದು ಅಂಕಿತ್ ಸಲ್ಲಿರುವ ಮನವಿಪತ್ರದ ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ವಸ್ತುಸಂಗ್ರಹಾಲಯ ನಿರ್ಮಾಣದ ಕುರಿತ ಚರ್ಚೆಯೂ ನಡೆಯಲಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT