ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್‌ಷಿಪ್‌ಗಳಿಗೆ ಹೊಸ ಸ್ವರೂಪ: ಎಚ್‌ಐ

ಸ್ಥಳೀಯ ಟೂರ್ನಿಗಳಲ್ಲೂ ಭಿನ್ನತೆ: ಹಾಕಿ ಇಂಡಿಯಾ ನಿರ್ಧಾರ
Last Updated 15 ಏಪ್ರಿಲ್ 2020, 17:19 IST
ಅಕ್ಷರ ಗಾತ್ರ

ನವದೆಹಲಿ: ಅಥ್ಲೀಟುಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಹಾಗೂ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, ಸಾಂಸ್ಥಿಕ ಘಟಕಗಳು ಹಾಗೂ ಅಕಾಡೆಮಿಗಳಲ್ಲಿ ಕ್ರೀಡೆಯ ಬೆಳವಣಿಗೆ ಉದ್ಧೇಶದೊಂದಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಿಗೆ ಹೊಸ ಸ್ವರೂಪ ನೀಡಲು ಹಾಕಿ ಇಂಡಿಯಾ (ಎಚ್‌ಐ) ನಿರ್ಧರಿಸಿದೆ. 2021ಕ್ಕೆ ಇದನ್ನು ಜಾರಿಗೊಳಿಸಲು ತೀರ್ಮಾನಿಸಿದೆ.

ಹಾಕಿ ಇಂಡಿಯಾದ ಕಾರ್ಯಕಾರಿ ಮಂಡಳಿ ಇತ್ತೀಚೆಗೆ ಈ ನಿರ್ಧಾರ ತೆಗೆದುಕೊಂಡಿದೆ. ಎಚ್‌ಐ ನೋಂದಾಯಿತ ರಾಜ್ಯ ಸದಸ್ಯ ಘಟಕಗಳು, ಸಾರ್ವಜನಿಕ ವಲಯ ಘಟಕಗಳು ಅಥವಾ ವಿಭಾಗೀಯ ಘಟಕಗಳು ಮತ್ತು ಅಕಾಡೆಮಿ ಸದಸ್ಯ ಘಟಕಗಳ ಕ್ರಮವಾಗಿ ಸಬ್‌ ಜೂನಿಯರ್‌, ಜೂನಿಯರ್‌ ಹಾಗೂ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳು (ಪುರುಷ ಮತ್ತು ಮಹಿಳಾ) ಮರು ರೂಪ ಪಡೆಯಲಿವೆ.

ಟೂರ್ನಿಗಳ ಮರು ಸಂಘಟನೆಯ ಮಾದರಿಯ ಪ್ರಕಾರ, ಒಬ್ಬ ಆಟಗಾರ ಒಂದು ವಿಭಾಗದಲ್ಲಿ ಮಾತ್ರ ತನ್ನ ತಂಡವನ್ನು ಪ್ರತಿನಿಧಿಸಬಹುದು.

‘ಒಬ್ಬ ಆಟಗಾರ ಸಬ್‌ ಜೂನಿಯರ್, ಜೂನಿಯರ್‌ ಅಥವಾ ಸೀನಿಯರ್‌ ಇವುಗಳಲ್ಲಿ ಒಂದು ವಯೋವರ್ಗ ವಿಭಾಗದಲ್ಲಿ ಮಾತ್ರ ಆಡಬೇಕಾಗುತ್ತದೆ. ಇದರಿಂದ ಹೆಚ್ಚಿನ ಆಟಗಾರರು ಪ್ರಮುಖ ಸ್ಥಳೀಯ ಟೂರ್ನಿಗಳಲ್ಲಿ ಆಡುವ ಅವಕಾಶ ಪಡೆಯಲು ಸಾಧ್ಯವಾಗುತ್ತದೆ’ ಎಂದು ಎಚ್‌ಐ ಹೇಳಿದೆ.

‘ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಅರ್ಹತೆಯ ಭಾಗವಾಗಿ, ಪ್ರತೀ ರಾಜ್ಯ ಘಟಕಗಳು ಪ್ರತಿ ವಿಭಾಗದಲ್ಲಿ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ಗಳನ್ನು ನಡೆಸುವುದು ಕಡ್ಡಾಯ’ ಎಂದೂ ಎಚ್‌ಐ ಹೇಳಿದೆ.

‘ವಿವಿಧ ವಯೋವರ್ಗದವರಿಗಾಗಿ ಈ ಹಿಂದೆ ಆಯೋಜಿಸುತ್ತಿದ್ದ ಎ ಹಾಗೂ ಬಿ ಡಿವಿಷನ್‌ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳು ಇನ್ನು ಮುಂದೆ ಇರುವುದಿಲ್ಲ’ ಎಂದು ಎಚ್‌ಐ ಅಧ್ಯಕ್ಷ ಮೊಹಮ್ಮದ್‌ ಮುಷ್ತಾಕ್‌ ಅಹಮದ್ ಹೇಳಿದ್ದಾರೆ.

ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು) ಹಾಗೂ ವಿಭಾಗೀಯ ಟೂರ್ನಿಗಳಲ್ಲೂ ಬದಲಾವಣೆ ಇರಲಿದೆ’ ಎಂದು ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಇತ್ತೀಚೆಗೆ ರೂಪಿಸಿರುವ ನಿಯಮಗಳ ಪ್ರಕಾರ ಟೂರ್ನಿಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT