ಬುಧವಾರ, ಮಾರ್ಚ್ 3, 2021
30 °C

ಪ್ರತಿ ಪಂದ್ಯದ ನಂತರ ಚಾಪೆಲ್ ವಿಚಿತ್ರ ಹೇಳಿಕೆ ನೀಡುತ್ತಾರೆ: ಸ್ಮಿತ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಡಿಲೇಡ್:  ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಅವರು ಪ್ರತಿಯೊಂದು ಪಂದ್ಯದ ನಂತರವೂ ವಿಚಿತ್ರವಾದ ಹೇಳಿಕೆ ನೀಡುತ್ತಾರೆ ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಶಾರ್ಟ್‌ ಪಿಚ್ ಬೌಲಿಂಗ್ ಎದುರಿಸುವ ಸಂದರ್ಭದಲ್ಲಿ ಪಾಲಿಸಬೇಕಾದ ಸುರಕ್ಷತೆ ನಿಯಮಗಳ ಕುರಿತು ಮರುಅವಲೋಕನ ಅಗತ್ಯವಿದೆ. ಬ್ಯಾಟ್ಸ್‌ಮನ್‌ಗಳ ರಕ್ಷಣೆಗೆ ನಿಯಮಗಳನ್ನು ಮತ್ತಷ್ಟು ಸುಧಾರಣೆ ಮಾಡುವ ಅಗತ್ಯವಿದೆ ಎಂದು ಈಚೆಗೆ ಚಾಪೆಲ್ ಈಚೆಗೆ ಹೇಳಿದ್ದರು.  ಕ್ರಿಕೆಟ್‌ನಲ್ಲಿ ಬೌನ್ಸರ್‌ ಎಸೆತಗಳನ್ನು ನಿಷೇಧಿಸಬೇಕೆಂಕು ಕೆಲವರು ಮಾಡಿದ್ದ ಸಲಹೆಗಳನ್ನು ಚಾಪೆಲ್ ವಿರೋಧಿಸಿದ್ದರು.

ಈ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಸ್ಮಿತ್, ’ಶಾಟ್‌ ಪಿಚ್ ಎಸೆತಗಳು ಕ್ರಿಕೆಟ್ ಪಂದ್ಯಗಳ ಅವಿಭಾಜ್ಯ ಅಂಗವಾಗಿವೆ. ಆದ್ದರಿಂದ ಅವುಗಳನ್ನು ನಿಯಮಬಾಹಿರವಾಗಿಸುವುದು ಸರಿಯಲ್ಲ‘ ಎಂದರು.

ಭಾರತ ವಿರುದ್ಧದ ಸರಣಿಯ ಕುರಿತು ಪ್ರತಿಕ್ರಿಯಿಸಿದ ಸ್ಮಿತ್, ’ಸೋಲಿನ ಕಹಿಯನ್ನು ಮುಂದುವರಿಯಬೇಕು‘ ಎಂದು ಸಲಹೆ ನೀಡಿದರು.

’ಬೌಲರ್‌ಗಳು ಉತ್ತಮ ಬೌಲಿಂಗ್ ಮಾಡಿದ್ದನ್ನು ನೋಡಿದ್ದೇವೆ. ಸಂಘಟಿತ ಹೋರಾಟದ ಫಲವಾಗಿ ನಮ್ಮ ಮೂವರು ಬೌಲರ್‌ಗಳಿಂದ ಇಂತಹ ಸಾಮರ್ಥ್ಯಪ್ರದರ್ಶನ ಸಾಧ್ಯವಾಯಿತು. ಲೆಂಗ್ತ್ ಮತ್ತು ಲೈನ್‌ ಶಿಸ್ತಿನಿಂದ ಕೂಡಿತ್ತು‘ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು