ಮೈಸೂರು: ಮಣಿಕಾಂತ್ ಶಿವಾನಂದ್ (71) ಮತ್ತು ಧ್ರುವ್ ಕೃಷ್ಣನ್ (59) ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ 19 ವರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಹಾರಾಷ್ಟ್ರ ತಂಡಕ್ಕೆ ಪ್ರತ್ಯುತ್ತರ ನೀಡಿತು.

ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬುಧವಾರ ಎರಡನೇ ದಿನದಾಟ ಮುಂದುವರಿಸಿದ ಮಹಾರಾಷ್ಟ್ರ ಅನೀಶ್ ಜೋಶಿ ಅರ್ಧಶತಕದ (58 ರನ್) ನೆರವಿನಿಂದ 94.2 ಓವರ್ಗಳಲ್ಲಿ 304 ರನ್ ಗಳಿಸಿ ಆಲೌಟ್ ಆಯಿತು. ಅದಕ್ಕೆ ತಕ್ಕ ಉತ್ತರ ಕೊಟ್ಟ ಆತಿಥೇಯ ತಂಡವು ದಿನದಾಟದ ಅಂತ್ಯಕ್ಕೆ 5ಕ್ಕೆ 252 ರನ್ಗಳಿಸಿ ಉತ್ತಮ ಮೊತ್ತದತ್ತ ಹೆಜ್ಜೆ ಇಟ್ಟಿದೆ.

ಮಣಿಕಾಂತ್ ಆಸರೆ: ಸಮಯೋಚಿತ ಆಟವಾಡಿದ ಮಣಿಕಾಂತ್ ಅವರು ಧ್ರುವ್ ಕೃಷ್ಣನ್ ಮತ್ತು ನಾಯಕ ಅನ್ವಯ್ ದ್ರಾವಿಡ್ (38 ರನ್) ಅವರೊಂದಿಗೆ ಉತ್ತಮ ಇನಿಂಗ್ಸ್ ಕಟ್ಟಿದರು. ಜೊತೆಯಾಟದಲ್ಲಿ ಕ್ರಮವಾಗಿ 75 ಹಾಗೂ 66 ರನ್ ತಂಡಕ್ಕೆ ಹರಿದುಬಂತು. ಸ್ವಶಿಕ್ ಜಗತಾಪ್ ಅವರ ಸ್ಪಿನ್ ಮೋಡಿಗೆ ಧ್ರುವ್ ಮತ್ತು ಅನ್ವಯ್ ವಿಕೆಟ್ ಒಪ್ಪಿಸಿದರೆ, ಹರ್ಷಿಲ್ ಸಾವಂತ್ ಎಸೆತದಲ್ಲಿ ಮಣಿಕಾಂತ್ ಔಟಾದರು. ವರುಣ್ ಪಟೇಲ್ 34 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಮಹಾರಾಷ್ಟ್ರ: 94.2 ಓವರ್ಗಳಲ್ಲಿ 304 (ಆರ್ಕಮ್ ಸಯ್ಯದ್ 68, ಅನೀಶ್ ಜೋಶಿ 58; ವೈಭವ್ ಶರ್ಮಾ 77ಕ್ಕೆ 5, ಮಣಿಕಾಂತ್ ಶಿವಾನಂದ 13ಕ್ಕೆ 2). ಕರ್ನಾಟಕ: 78 ಓವರ್ಗಳಲ್ಲಿ 5ಕ್ಕೆ 252 (ಮಣಿಕಾಂತ್ ಶಿವಾನಂದ 71, ಧ್ರುವ್ ಕೃಷ್ಣನ್ 59; ಸ್ವಶಿಕ್ ಜಗತಾಪ್ 72ಕ್ಕೆ 2)