ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ: ಮುನ್ನಡೆಗೆ ಮುಂಬೈ ಹೋರಾಟ

185 ರನ್ನಿಗೆ ಆಟ ಮುಗಿಸಿದ ಕರ್ನಾಟಕ
Last Updated 11 ಜನವರಿ 2020, 22:36 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕ ತಂಡ, ಶನಿವಾರ ಮುಂಬೈ ವಿರುದ್ಧ ಆರಂಭವಾದಕೂಚ್‌ ಬಿಹಾರ್‌ ಟ್ರೋಫಿ (19 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ 185 ರನ್‌ಗಳಿಗೆ ಆಲೌಟ್‌ ಆಯಿತು. ದಿನದಾಟ ಮುಗಿದಾಗ ಮುಂಬೈ 2 ವಿಕೆಟ್‌ಗೆ 96 ರನ್‌ ಗಳಿಸಿತ್ತು.

ಬಾಂದ್ರಾ –ಕುರ್ಲಾ ಕಾಂಪ್ಲೆಕ್ಸ್‌ನ ಶರದ್‌ ಪವಾರ್ ಕ್ರಿಕೆಟ್‌ ಅಕಾಡೆಮಿ ಮೈದಾನದಲ್ಲಿ ಟಾಸ್‌ ಗೆದ್ದ ಆತಿಥೇಯರು, ಕರ್ನಾಟಕವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಒಂದು ಹಂತದಲ್ಲಿ 2 ವಿಕೆಟ್‌ಗೆ 84 ರನ್ ಗಳಿಸಿದ್ದ ಕರ್ನಾಟಕ ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಹಾಗೂ ಆರಂಭ ಆಟಗಾರ ಲೋಚನ್‌ ಎಸ್‌.ಗೌಡ (92 ಎಸೆತ, 7 ಬೌಂಡರಿಗಳಿದ್ದ 47) ಮತ್ತು ಬ್ಯಾಟ್ಸ್‌ಮನ್‌ ಸ್ಮರಣ್‌ ಆರ್‌. (82 ಎಸೆತಗಳಲ್ಲಿ 57, 1 ಸಿ, 10 ಬೌಂ.) ಬಿಟ್ಟರೆ ಉಳಿದವರು 20ರ ಗಡಿ ದಾಟಲಿಲ್ಲ.

ಆತಿಥೇಯರು ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಲು ಇನ್ನೂ 89 ರನ್ ಗಳಿಸಬೇಕಾಗಿದೆ.

ಸ್ಕೋರುಗಳು: ಕರ್ನಾಟಕ: 57.5 ಓವರುಗಳಲ್ಲಿ 185 (ಲೋಚನ್‌ ಎಸ್‌.ಗೌಡ 47, ಸ್ಮರಣ್‌ ಆರ್‌. 57; ತುಷಾರ್‌ ಕದಂ 37ಕ್ಕೆ3, ಧನಿತ್‌ ರಾವುತ್‌ 46ಕ್ಕೆ3, ಸೂರ್ಯಾನ್ಷ್‌ ಶೆಡ್ಗೆ 27ಕ್ಕೆ3); ಮುಂಬೈ: 26 ಓವರುಗಳಲ್ಲಿ 2 ವಿಕೆಟ್‌ಗೆ 96 (ವರುಣ್‌ ಲಾವಂಡೆ 49, ಪ್ರಗ್ನೇಶ್‌ ಕಣಪಿಲ್ಲೇವರ್ ಬ್ಯಾಟಿಂಗ್‌ 25; ತಹಾ ಖಾನ್‌ 25ಕ್ಕೆ1, ಅಕಿಬ್‌ ಜವಾದ್‌ 29ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT