ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ 300 ರನ್ ಗಳಿಸುವ ಅವಕಾಶ ಕೈಚೆಲ್ಲಿದೆ: ಇಶಾನ್ ಕಿಶನ್ ಬೇಸರ

Last Updated 10 ಡಿಸೆಂಬರ್ 2022, 15:56 IST
ಅಕ್ಷರ ಗಾತ್ರ

ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗದ ದ್ವಿಶತಕ ಸಿಡಿಸಿದ ಭಾರತದ ಆರಂಭಿಕ ಆಟಗಾರ ಇಶಾನ್ ಕಿಶನ್, ತ್ರಿಶತಕ ಸಿಡಿಸಬಹುದಾದಬಂಗಾರದಂತಹ ಅವಕಾಶ ಕೈಚೆಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಕ್ರಿಕೆಟ್ ವೃತ್ತಿ ಜೀವನದ 10ನೇ ಏಕದಿನ ಪಂದ್ಯ ಆಡಿದ 24 ವರ್ಷದ ಇಶಾನ್ ಕಿಶನ್, ನಿರ್ಭೀತಿಯಿಂದ ಬ್ಯಾಟ್ ಬೀಸಿದರು. ಕ್ರಿಸ್ ಗೇಲ್ ಅವರ ದಾಖಲೆಯನ್ನು(138 ಎಸೆತಗಳಲ್ಲಿ ದ್ವಿಶತಕ) ಪುಡಿಗಟ್ಟಿದರು. 126 ಎಸೆತಗಳಲ್ಲಿ 200ರ ಗಡಿ ದಾಟಿದರು. ಇಶಾನ್ ಕಿಶನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 50 ಓವರ್ ಅಂತ್ಯಕ್ಕೆ 409 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. 210 ರನ್ ಗಳಿಸಿದ ಇಶಾನ್ ಕಿಶನ್ 36ನೇ ಓವರ್‌ನಲ್ಲಿ ಔಟ್ ಆಗಿ ನಿರ್ಗಮಿಸಿದರು.

ಈ ಬಗ್ಗೆ ಮಾತನಾಡಿರುವ ಅವರು,‘ನಾನು ಔಟ್ ಆದಾಗ 14.1 ಓವರ್ ಬಾಕಿ ಇತ್ತು. ನಾನು 300 ರನ್ ಸಹ ಗಳಿಸಬಹುದಿತ್ತು’ಎಂದು ಸೋನಿ ಲೈವ್‌ಗೆಹೇಳಿದ್ದಾರೆ.

ದ್ವಿಶತಕ ಸಿಡಿಸಿದ ಭಾರತದ ನಾಲ್ಕನೇ ಕ್ರಿಕೆಟಿಗ ಎಂಬ ಖ್ಯಾತಿಗೆ ಜಾರ್ಖಂಡ್ ಕ್ರಿಕೆಟಿಗ ಪಾತ್ರರಾಗಿದ್ದಾರೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ ಅತ್ಯಧಿಕ ಮೊತ್ತ 264 ಸೇರಿ 3 ಬಾರಿ ದ್ವಿಶತಕ ದಾಖಲಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ತಲಾ ಒಂದು ಬಾರಿ ದ್ವಿಶತಕ ಗಳಿಸಿದ್ಧಾರೆ.

‘ಅಂತಹ ದಂತಕಥೆಗಳ ಸಾಲಿನಲ್ಲಿ ನನ್ನ ಹೆಸರು ಇರುವುದು ನನ್ನ ಅದೃಷ್ಟ. ಪಿಚ್ ಬ್ಯಾಟಿಂಗ್‌ಗೆ ಅತ್ಯಂತ ಅನುಕೂಲಕರವಾಗಿತ್ತು. ಪ್ರತಿ ಎಸೆತದಲ್ಲೂ ಸಾಧ್ಯವಾದಷ್ಟೂ ರನ್ ಗಳಿಸುವುದು ನನ್ನ ಉದ್ದೇಶವಾಗಿತ್ತು’ಎಂದು ಅವರು ಹೇಳಿದ್ದಾರೆ.

ಈ ಪಂದ್ಯವನ್ನು ಭಾರತ ತಂಡ 227 ರನ್‌ಗಳ ಅಂತರದಿಂದ ಗೆದ್ದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT