ಭಾನುವಾರ, ಮೇ 9, 2021
22 °C

ಕ್ರಿಕೆಟ್‌: ಶಿವವಿಲಾಸ ನಗರ ತಂಡಕ್ಕೆ ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ಚಿಕ್ಕಸೂಗೂರಿನ ವಿಸಿಸಿ ಸೀನಿಯರ್ ತಂಡದ ವಿರುದ್ಧ ಶಿವವಿಲಾಸ ನಗರದ ತಂಡವು ಜಯಗಳಿಸಿ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

ಚಿಕ್ಕಸೂಗೂರ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡ, ವಿಸಿಸಿ ಸೀನಿಯರ್ ತಂಡ 12 ಓವರ್‌ಗಳಲ್ಲಿ 6 ವಿಕೆಟ್ ಕಳೆದು ಕೊಂಡು 90 ರನ್‌ ಗಳಿಸಿತು.

ಶಿವವಿಲಾಸ ನಗರದ ತಂಡ 10.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 91 ರನ್ ಮಾಡುವ ಮೂಲಕ ಜಯಗಳಿಸಿ ಟೂರ್ನಿಯ ಚಾಂಪಿಯನ್ ಟ್ರೋಪಿ ಪಡೆದರು. ವಿಜೇತರಾದ ತಂಡಕ್ಕೆ ಮುಖಂಡರಾದ ಅಂಬಯ್ಯಗೌಡ, ಸೂಗೂರೆಡ್ಡಿ ಮತ್ತು ಆಂಜನೇಯ ಪೂಜಾರಿ ಅವರು ಬಹುಮಾನ ವಿತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು