ಕ್ರೈಸ್ಟ್ಚರ್ಚ್: ಇಂಗ್ಲೆಂಡ್ ತಂಡದ ಆಫ್ ಸ್ಪಿನ್ನರ್ ಶೋಯೆಬ್ ಬಷೀರ್ ಅವರು 69 ರನ್ನಿಗೆ 4 ವಿಕೆಟ್ ಪಡೆದು, ಗುರುವಾರ ಆರಂಭವಾದ ಮೊದಲ ಕ್ರಿಕೆಟ್ ಟೆಸ್ಟ್ನಲ್ಲಿ ನ್ಯೂಜಿಲೆಂಡ್ ತಂಡದ ನಾಗಾಲೋಟಕ್ಕೆ ತಡೆಯೊಡ್ಡಿದರು.

ವೇಗಿಗಳಾದ ಗಸ್ ಅಟ್ಕಿನ್ಸನ್ ಮತ್ತು ಬ್ರೈಡನ್ ಕಾರ್ಸ್ ಅವರೂ ಎರಡೆರಡು ವಿಕೆಟ್ಗಳನ್ನು ಪಡದರು. ಹ್ಯಾಜ್ಲಿ ಓವಲ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡ ಕೊನೆಯ ಅವಧಿಯ ಆಟದಲ್ಲಿ ಆತಿಥೇಯರಿಗೆ ತಿರುಗೇಟು ನೀಡಿತು. ನ್ಯೂಜಿಲೆಂಡ್ ಕೊನೆಯ ಅವಧಿಯಲ್ಲಿ ಕೇನ್ ವಿಲಿಯಮ್ಸನ್ (93, 197ಎ, 4x10) ಅವರ ವಿಕೆಟ್ ಸೇರಿದಂತೆ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ದಿನದಾಟ ಮುಗಿದಾಗ ನ್ಯೂಜಿಲೆಂಡ್ 8 ವಿಕೆಟ್ಗೆ 319 ರನ್ ಗಳಿಸಿತ್ತು.

ವಿಲಿಯಮ್ಸನ್ ಏಳು ರನ್ಗಳಿಂದ ಶತಕ ಕಳೆದುಕೊಂಡರು. ಬಿರುಸಿನ ಆಟವಾಡಿದ ನಾಯಕ ಟಾಮ್ ಲೇಥಮ್ (47, 54ಎ) ಮೂರು ರನ್ಗಳಿಂದ ಅರ್ಧ ಶತಕ ತಪ್ಪಿಸಿಕೊಂಡರು.

ಕೊನೆಯ ಅವಧಿಯಲ್ಲಿ ಗ್ಲೆನ್ ಫಿಲಿಪ್ಸ್ ಮತ್ತು ಮ್ಯಾಟ್ ಹೆನ್ನಿ ಎಂಟನೇ ವಿಕೆಟ್ಗೆ 46 ರನ್ ಸೇರಿಸಿ ಚೇತರಿಕೆ ನೀಡುವಂತೆ ಕಂಡಿತು. ಆದರೆ ಹೆನ್ರಿ (18) ಲಾಂಗ್ಆನ್ನಲ್ಲಿ ಡಕೆಟ್ಗೆ ಕ್ಯಾಚ್ ನೀಡುವ ಮೂಲಕ ಬಷೀರ್ ಅವರಿಗೆ ನಾಲ್ಕನೇ ವಿಕೆಟ್ ನೀಡಿದರು. ಇತರೆ ರೂಪದಲ್ಲಿ 35 ರನ್ಗಳು ಬಂದವು.

ಸ್ಕೋರುಗಳು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್: 8 ವಿಕೆಟ್ಗೆ 319 (ಟಾಮ್ ಲೇಥಮ್ 47, ಕೇನ್ ವಿಲಿಯಮ್ಸನ್ 93, ರಚಿನ್ ರವೀಂದ್ರ 34, ಗ್ಲೆನ್ ಫಿಲಿಪ್ಸ್ ಔಟಾಗದೇ 41; ಶೋಯೆಬ್ ಬಷೀರ್ 69ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.