ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಹೃದಯಾಘಾತ: ಕ್ರಿಕೆಟಿಗ ಸಾವು

ಕ್ರಿಕೆಟ್‌ ಟೂರ್ನಿ ವೇಳೆ ಘಟನೆ
Published 22 ಫೆಬ್ರುವರಿ 2024, 16:06 IST
Last Updated 22 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಗುರುವಾರ ಆಡಿಟ್‌ ಮತ್ತು ಅಕೌಂಟ್ಸ್ ಇಲಾಖೆಯ ಕ್ರಿಕೆಟ್‌ ಟೂರ್ನಿ ಪಂದ್ಯದ ವೇಳೆ ಕರ್ನಾಟಕ ತಂಡದ ಆಟಗಾರ ಕೆ.ಹೊಯ್ಸಳ (34) ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಆರ್‌ಎಸ್‌ಐ ಕ್ರೀಡಾಂಗಣದಲ್ಲಿ ಆರಂಭವಾದ ಈ ಎರಡು ದಿನಗಳ ಟೂರ್ನಿಯಲ್ಲಿ ಕರ್ನಾಟಕ ತಂಡ ಒಂದು ರನ್‌ನಿಂದ ತಮಿಳುನಾಡು ತಂಡವನ್ನು ಸೋಲಿಸಿದ್ದು ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಪಂದ್ಯದ ನಂತರ ಮಧ್ಯಾಹ್ನ ಊಟಕ್ಕೆ ಕುಳಿತುಕೊಳ್ಳುವ ಸ್ವಲ್ಪ ಮೊದಲು ಹಠಾತ್ತಾಗಿ ಅವರು ಕುಸಿದುಬಿದ್ದರು ಎಂದು ತಂಡದ ಸಿಬ್ಬಂದಿ ಒಬ್ಬರು ತಿಳಿಸಿದರು.

ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಮಧ್ಯಮ ವೇಗದ ಬೌಲರ್ ಆಗಿದ್ದ ಅವರು 25 ವರ್ಷದೊಳಗಿನವರ ಟೂರ್ನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಕೆಪಿಎಲ್‌ ಟೂರ್ನಿಯಲ್ಲೂ ಆಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT