ಕ್ರೈಸ್ಟ್ಚರ್ಚ್, ನ್ಯೂಜಿಲೆಂಡ್: ಬ್ರೈಡನ್ ಕಾರ್ಸ್ ಅವರ ಬೌಲಿಂಗ್ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡವು ಭಾನುವಾರ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಎಂಟು ವಿಕೆಟ್ಗಳಿಂದ ಜಯಿಸಿತು.

ಭಾರತ ವಿರುದ್ಧದ ಸರಣಿಯನ್ನು 0–3ರಿಂದ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ಗೆ ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದ ನ್ಯೂಜಿಲೆಂಡ್ಗೆ ಈ ಸೋಲು ಹಿನ್ನಡೆಯಾಗಿದೆ.

ಮೊದಲ ಇನಿಂಗ್ಸ್ನಲ್ಲಿ 151 ರನ್ಗಳ ಹಿನ್ನಡೆ ಅನುಭವಿಸಿದ್ದ ಕಿವೀಸ್, ಎರಡನೇ ಇನಿಂಗ್ಸ್ನಲ್ಲಿ 254 ರನ್ಗಳಿಗೆ ಕುಸಿಯಿತು. ಕೇನ್ ವಿಲಿಯಮ್ಸನ್ (61;86ಎ) ಮತ್ತು ಡೇರಿಲ್ ಮಿಚೆಲ್ (84; 167ಎ) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು.

ಮೊದಲ ಇನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದ ಕಿವೀಸ್ನ ಬಲಗೈ ವೇಗದ ಬೌಲರ್ ಕಾರ್ಸೆ ಎರಡನೇ ಇನಿಂಗ್ಸ್ನಲ್ಲೂ (42ಕ್ಕೆ 6) ಆತಿಥೇಯ ತಂಡವನ್ನು ಚೇತರಿಸದಂತೆ ನೋಡಿಕೊಂಡರು. ಈ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ಬಾರಿ 10 ವಿಕೆಟ್ ಗೊಂಚಲು ಪಡೆದರು. ಅವರಿಗೆ ಕ್ರಿಸ್ ವೋಕ್ಸ್ (59ಕ್ಕೆ 3) ಸಾಥ್ ನೀಡಿದರು.

ಗೆಲುವಿಗೆ 104 ರನ್ಗಳ ಗುರಿ ಪಡೆದ ಆಂಗ್ಲ ಪಡೆ 12.4 ಓವರ್ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ದಡ ಸೇರಿತು. ಜೇಕಬ್ ಬೆಥೆಲ್ (ಔಟಾಗದೇ 50; 37) ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದರು.

ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1–0 ಮುನ್ನಡೆ ಪಡೆದಿದೆ. ಎರಡನೇ ಪಂದ್ಯ ವೆಲ್ಲಿಂಗ್ಟನ್ನಲ್ಲಿ ಶುಕ್ರವಾರ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್:

ಮೊದಲ ಇನಿಂಗ್ಸ್: ನ್ಯೂಜಿಲೆಂಡ್: 348. ಇಂಗ್ಲೆಂಡ್: 499. ಎರಡನೇ ಇನಿಂಗ್ಸ್: ನ್ಯೂಜಿಲೆಂಡ್: 74.1 ಓವರ್ಗಳಲ್ಲಿ 254 (ಕೇನ್ ವಿಲಿಯಮ್ಸನ್ 61, ಡೇರಿಲ್ ಮಿಚೆಲ್ 84, ಬ್ರೈಡನ್ ಕಾರ್ಸೆ 42ಕ್ಕೆ 6, ಕ್ರಿಸ್ ವೋಕ್ಸ್ 59ಕ್ಕೆ 3). ಫಲಿತಾಂಶ: ಇಂಗ್ಲೆಂಡ್ಗೆ 8 ವಿಕೆಟ್ ಜಯ, ಸರಣಿ 1–0 ಮುನ್ನಡೆ. ಪಂದ್ಯದ ಆಟಗಾರ: ಬ್ರೈಡನ್ ಕಾರ್ಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.