ಆಕ್ಲೆಂಡ್: ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಡೆವೊನ್ ಕಾನ್ವೆ ಮತ್ತು ಫಿನ್ ಅಲೆನ್ ಅವರು ನ್ಯೂಜಿಲೆಂಡ್ ಕ್ರಿಕೆಟ್ ಕೇಂದ್ರ ಗುತ್ತಿಗೆಯಲ್ಲಿ ಉಳಿಯಲು ನಿರಾಕರಿಸಿದ್ದಾರೆ. ಅವರು ಫ್ರ್ಯಾಂಚೈಸಿ ಕ್ರಿಕೆಟ್‌ನತ್ತ ಒಲವು ತೋರಿಸಿದ್ದಾರೆ.

ಗುರುವಾರ ತಮ್ಮ ನಿರ್ಧಾರವನ್ನು ಈ ಇಬ್ಬರೂ ಆಟಗಾರರು ಪ್ರಕಟಿಸಿದ್ದಾರೆ.

‘ನ್ಯೂಜಿಲೆಂಡ್ ಕ್ರಿಕೆಟ್ ನನಗೆ ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಿವೀಸ್ ತಂಡದಲ್ಲಿ ಆಡುವುದಕ್ಕೆ ನನ್ನ ಆದ್ಯತೆ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ತಂಡವನ್ನು ಗೆಲ್ಲಿಸುವುದು ಮುಖ್ಯ’ ಎಂದು ಕಾನ್ವೆ ಅವರು ‘ಎಕ್ಸ್’ನಲ್ಲಿ ಹಾಕಿರುವ ವಿಡಿಯೊದಲ್ಲಿ ಹೇಳಿದ್ದಾರೆ.

‘ಗಂಭೀರವಾಗಿ ಯೋಚಿಸಿಯೇ ನಾನು ಕೇಂದ್ರ ಗುತ್ತಿಗೆಯನ್ನು ಕೈಬಿಟ್ಟಿದ್ದೇನೆ. ನಾನು ಮತ್ತು ನನ್ನ ಕುಟುಂಬದ ಹಿತಾಸಕ್ತಿ ಇದರಲ್ಲಿ ಅಡಗಿದೆ’ ಎಂದು ಕಾನ್ವೆ ಹೇಳಿದ್ಧಾರೆ.

ಈಚೆಗಷ್ಟೇ ಕೇನ್ ವಿಲಿಯಮ್ಸನ್ ಅವರು ಶ್ರೀಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ದೂರ ಉಳಿದಿದ್ದರು. ಎಸ್‌ಎ ಟಿ20 ಲೀಗ್‌ನಲ್ಲಿ ಆಡಲು ಈ ನಿರ್ಧಾರ ಮಾಡಿದ್ದರು. ವೇಗಿಗಳಾದ ಆ್ಯಡಂ ಮಿಲ್ನೆ ಮತ್ತು ಲಾಕಿ ಫರ್ಗ್ಯುಸನ್ ಅವರು ಕೂಡ ಇಂತಹದೇ ನಿರ್ಧಾರ ಕೈಗೊಂಡಿದ್ದರು.

ಕಾನ್ವೆ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಾರೆ.

25 ವರ್ಷದ ಫಿನ್ ಅಲೆನ್ ಅವರು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸ್ಯಾನ್ ಫ್ರಾನ್ಸಿಕೊ ಯುನಿಕಾರ್ನಸ್ ಮತ್ತು ದ ಹಂಡ್ರೆಡ್ ಟೂರ್ನಿಯ ಸದರ್ನ್ ಬ್ರೇವ್ ಹಾಗೂ ಬರ್ಮಿಂಗ್‌ಹ್ಯಾಮ್ ಫಿನಿಕ್ಸ್ ತಂಡಗಳಲ್ಲಿದ್ದಾರೆ. ಐಪಿಎಲ್‌ನಲ್ಲಿ ಕೆಲವು ಕಾಲ ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.