ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್‌ ಟ್ರೋಫಿ: ಸೆಮಿಗೆ ಪಶ್ಚಿಮ, ಉತ್ತರ ವಲಯ

Last Updated 11 ಸೆಪ್ಟೆಂಬರ್ 2022, 13:04 IST
ಅಕ್ಷರ ಗಾತ್ರ

ಪುದುಚೇರಿ/ ಚೆನ್ನೈ: ಪಶ್ಚಿಮ ವಲಯ ಮತ್ತು ಉತ್ತರ ವಲಯ ತಂಡಗಳು ಮೊದಲ ಇನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದವು.

ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಶ್ಚಿಮ ವಲಯ– ಈಶಾನ್ಯ ವಲಯ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಅಜಿಂಕ್ಯ ರಹಾನೆ ನೇತೃತ್ವದ ಪಶ್ಚಿಮ ವಲಯ ಮೊದಲ ಇನಿಂಗ್ಸ್‌ನಲ್ಲಿ 355 ರನ್‌ ಮುನ್ನಡೆ ಗಳಿಸಿತ್ತು. ಕೊನೆಯ ದಿನವೂ ‘ಬ್ಯಾಟಿಂಗ್‌ ತಾಲೀಮು’ ನಡೆಸಿದ ಈ ತಂಡ ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವಾಗ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 268 ರನ್‌ ಗಳಿಸಿತ್ತು.

ಪುದುಚೇರಿಯಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರ ವಲಯ ತಂಡ, ಪೂರ್ವ ವಲಯ ಎದುರು ಇನಿಂಗ್ಸ್‌ ಮುನ್ನಡೆ ಗಳಿಸಿತು. ಮೂರು ವಿಕೆಟ್‌ಗೆ 433 ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ ಉತ್ತರ ವಲಯ, ಮೊದಲ ಇನಿಂಗ್ಸ್‌ನಲ್ಲಿ 545 ರನ್‌ಗಳಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಪಶ್ಚಿಮ ವಲಯ 123 ಓವರ್‌ಗಳಲ್ಲಿ 2ಕ್ಕೆ 590 ಡಿಕ್ಲೇರ್ಡ್‌. ಈಶಾನ್ಯ ವಲಯ 81.5 ಓವರ್‌ಗಳಲ್ಲಿ 235. ಎರಡನೇ ಇನಿಂಗ್ಸ್‌: ಪಶ್ಚಿಮ ವಲಯ 64.3 ಓವರ್‌ಗಳಲ್ಲಿ 5 ವಿಕೆಟ್‌ಗೆ 268 (ಅತಿಥ್‌ ಶೇಟ್‌ ಔಟಾಗದೆ 102, ಶಮ್ಸ್‌ ಮುಲಾನಿ 97, ದಿಪ್ಪು ಸಂಗ್ಮಾ 70ಕ್ಕೆ 3) ಫಲಿತಾಂಶ: ಪಂದ್ಯ ಡ್ರಾ

ಪುದುಚೇರಿ ಪಂದ್ಯ: ಮೊದಲ ಇನಿಂಗ್ಸ್‌: ಪೂರ್ವ ವಲಯ 136.4 ಓವರ್‌ಗಳಲ್ಲಿ 397. ಉತ್ತರ ವಲಯ148.5 ಓವರ್‌ಗಳಲ್ಲಿ 545 (ಮನ್‌ದೀಪ್‌ ಸಿಂಗ್ 63, ಹಿಮಾನ್ಶು ರಾಣಾ 81, ಶಹಬಾಜ್‌ ಅಹ್ಮದ್‌ 86ಕ್ಕೆ 5). ಎರಡನೇ ಇನಿಂಗ್ಸ್‌: ಪೂರ್ವ ವಲಯ 21 ಓವರ್‌ಗಳಲ್ಲಿ 3 ವಿಕೆಟ್‌ಗೆ 102 (ಅಭಿಷೇಕ್ ಔಟಾಗದೆ 50) ಫಲಿತಾಂಶ: ಪಂದ್ಯ ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT