ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ನಿಂದನೆ ನಿಭಾಯಿಸುವಲ್ಲಿ ವಿಫಲ; ಯಾರ್ಕ್‌ಶೈರ್ ಮೇಲೆ ಇಸಿಬಿ ನಿರ್ಬಂಧ

Last Updated 5 ನವೆಂಬರ್ 2021, 11:12 IST
ಅಕ್ಷರ ಗಾತ್ರ

ಲಂಡನ್: ಮಾಜಿ ಕ್ರಿಕೆಟಿಗ ಅಜೀಮ್ ರಫೀಕ್ ಅವರ ಜನಾಂಗೀಯ ನಿಂದನೆ ಆರೋಪದ ಮೇಲೆ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸದಂತೆ ಯಾರ್ಕ್‌ಶೈರ್ ಕೌಂಟಿ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನಿರ್ಬಂಧ ವಿಧಿಸಿದೆ.

ಅಜೀಮ್ ರಫೀಕ್ ಮಾಡಿರುವ ಜನಾಂಗೀಯ ನಿಂದನೆ ಆರೋಪವು ಸ್ವತಂತ್ರ ತನಿಖೆಯಲ್ಲಿ ನಿಜವೆಂದು ಸಾಬೀತುಗೊಂಡಿದ್ದು, ಕ್ಲಬ್‌ನ ನಡೆ ತಿರಸ್ಕೃತ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿದೆ.

ಅಜೀಮ್ ರಫೀಕ್ ವಿರುದ್ಧ ಜನಾಂಗೀಯ ನಿಂದನೆ ಮಾಡಿರುವುದನ್ನು ಯಾರ್ಕ್‌ಶೈರ್ ಆಟಗಾರ ಗ್ಯಾರಿ ಬ್ಯಾಲೆನ್ಸ್ ತಪ್ಪೊಪ್ಪಿಕೊಂಡ ಬಳಿಕ ಇಸಿಬಿ ಕ್ರಮವನ್ನು ಕೈಗೊಂಡಿದೆ.

ಅಜೀಮ್ ರಫೀಕ್ ಎತ್ತಿರುವ ಆರೋಪಗಳನ್ನು ಯಾರ್ಕ್‌ಶೈರ್ ನಿಭಾಯಿಸಿರುವ ರೀತಿ ಸ್ವೀಕಾರಾರ್ಹವಲ್ಲ. ಅಲ್ಲದೆ ಇದರಿಂದಾಗಿ ಕ್ರಿಕೆಟ್‌ಗೆ ಹಾನಿಯನ್ನುಂಟು ಮಾಡಿದೆ ಎಂಬುದು ಸ್ಪಷ್ಟವಾಗಿದೆ. ಇದು ಕ್ರೀಡಾಸ್ಫೂರ್ತಿ ಹಾಗೂ ಕ್ರಿಕೆಟ್‌ನ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಕ್ರಿಕೆಟ್‌ನಲ್ಲಿ ಜನಾಂಗೀಯ ನಿಂದನೆ ಅಥವಾ ಭೇದಭಾವಕ್ಕೆ ಯಾವುದೇ ಸ್ಥಾನವಿಲ್ಲ. ಅಲ್ಲದೆ ಈ ಕುರಿತು ಗಮನಕ್ಕೆ ಬಂದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಆಟದ ಮೇಲಿನ ಬದ್ಧತೆಯನ್ನು ಪ್ರದರ್ಶಿಸಬೇಕಾದರೆ ಕಟ್ಟುನಿಟ್ಟಾಗಿ ವ್ಯವಹರಿಸಬೇಕು ಎಂದು ಹೇಳಿದೆ.

ಪಾಕಿಸ್ತಾನ ಮೂಲದ ರಫೀಕ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಸಮಯದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದರು. ಈ ಸಂಬಂಧ ಬ್ಯಾಲೆನ್ಸ್ ಅವರನ್ನು ಇಂಗ್ಲೆಂಡ್ ಆಯ್ಕೆಯಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡಲಾಗಿದೆ.

ಇಂಗ್ಲೆಂಡ್‌‌ನ ಅಂಡರ್-19 ತಂಡದ ಮಾಜಿ ನಾಯಕ ಅಜೀಮ್ ರಫೀಕ್ ಕಳೆದ ವರ್ಷ ಸಂದರ್ಶನವೊಂದರಲ್ಲಿ 2008-18ರ ಅವಧಿಯಲ್ಲಿ ಯಾರ್ಕ್‌ಶೈರ್‌ನಲ್ಲಿದ್ದ ಸಮಯದಲ್ಲಿ ಮುಸ್ಲಿಂ ಆದ ಕಾರಣ ತನ್ನನ್ನು ಹೊರಗಿನವರಂತೆ ನೋಡಿಕೊಳ್ಳಲಾಯಿತು ಎಂದು ಆರೋಪಿಸಿದ್ದರು.

ರಫೀಕ್ ಮಾಡಿರುವ 43 ಆರೋಪಗಳ ಪೈಕಿ ಸ್ವತಂತ್ರ ಸಮಿತಿಯು ಏಳು ಆರೋಪಗಳನ್ನು ಎತ್ತಿ ಹಿಡಿದಿದೆ. ಅಲ್ಲದೆ ಜನಾಂಗೀಯ ನಿಂದನೆ ಹಾಗೂ ಹಿಂಸೆಗೆ ಒಳಗಾಗಿದ್ದರು ಎಂಬುದು ಸಾಬೀತುಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT