ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ನಾಯಕತ್ವದ ಮೇಲೆ ಎಲ್ಗರ್‌ ಕಣ್ಣು

Last Updated 25 ಮೇ 2020, 20:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌: ಆರಂಭಿಕ ಬ್ಯಾಟ್ಸಮನ್‌ ಡೀನ್‌ ಎಲ್ಗರ್‌ ಅವರು ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ತಾನೂ ಆಕಾಂಕ್ಷಿ ಎಂದು ಸೋಮವಾರ ಹೇಳಿದ್ದಾರೆ. ತನಗೆ ಸಹಜವಾಗಿಯೇ ನಾಯಕತ್ವದ ಗುಣಗಳಿವೆ ಎಂದು ಅವರು ನುಡಿದರು.

ಫೆಬ್ರುವರಿಯಲ್ಲಿ ಟೆಸ್ಟ್‌ ಮಾದರಿಯ ನಾಯಕತ್ವಕ್ಕೆ ಫಾಪ್‌ ಡು ಪ್ಲೆಸಿ ರಾಜೀನಾಮೆ ನೀಡಿದ್ದರು. ಇದರ ಸಾರಥ್ಯವನ್ನು ಕ್ವಿಂಟನ್‌ ಡಿ ಕಾಕ್‌ ತೆಗೆದುಕೊಳ್ಳಲು ಬಯಸಿದ್ದರು. ಆದರೆ ಈಗಾಗಲೇ ಸೀಮಿತ ಓವರ್‌ಗಳ ಕ್ರಿಕೆಟ್‌ ನಾಯಕನಾಗಿರುವ ವಿಕೆಟ್‌ ಕೀ‍ಪರ್‌ ಡಿಕಾಕ್‌ಗೆ ಹೆಚ್ಚುವರಿ ಹೊರೆ ಬೇಡವೆಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯು (ಸಿಎಸ್‌ಎ) ಅವರ ಮನವಿಯನ್ನು ತಿರಸ್ಕರಿಸಿತ್ತು.

ದಕ್ಷಿಣ ಆಫ್ರಿಕಾ ತಂಡವು ವೆಸ್ಟ್‌ ಇಂಡೀಸ್‌ ವಿರುದ್ಧ ಜುಲೈನಲ್ಲಿ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ. ಹೀಗಾಗಿ ಸಿಎಸ್‌ಎ, ತಂಡದ ನಾಯಕನ ನೇಮಕದ ಗೊಂದಲದಲ್ಲಿದೆ.

‘ಟೆಸ್ಟ್‌ ನಾಯಕತ್ವ ನಿರ್ವಹಣೆ ಸವಾಲಿನ ಕೆಲಸ. ಶಾಲಾ ಹಂತದಿಂದ ಪ್ರಾಂತೀಯ ತಂಡ ಹಾಗೂ ಫ್ರಾಂಚೈಸ್‌ಗಳ ಸಾರಥ್ಯ ವಹಿಸಿದ ಅನುಭವವಿದೆ. ನಾಯಕತ್ವ ಗುಣ ನನ್ನಲ್ಲಿದೆ’ ಎಂದು ಎಲ್ಗರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT