ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಟೊ ಭರ್ಜರಿ ಶತಕ; ನ್ಯೂಜಿಲೆಂಡ್ ವಿರುದ್ಧ 305 ರನ್ ದಾಖಲಿಸಿದ ಇಂಗ್ಲೆಂಡ್

Last Updated 3 ಜುಲೈ 2019, 13:47 IST
ಅಕ್ಷರ ಗಾತ್ರ

ಚೆಸ್ಟರ್‌ ಲೀ ಸ್ಟ್ರೀಟ್‌, ಇಂಗ್ಲೆಂಡ್‌: ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ 8ವಿಕೆಟ್ ನಷ್ಟಕ್ಕೆ 305ರನ್ ದಾಖಲಿಸಿದೆ.

ಜಾನಿ ಬೆಸ್ಟೊ (106)ಅವರ ಭರ್ಜರಿ ಶತಕ ಮತ್ತು ಜೇಸನ್ ರಾಯ್ (60) ಉತ್ತಮ ಜತೆಯಾಟದ ಮೂಲಕ ಇಂಗ್ಲೆಂಡ್ ಆರಂಭದಲ್ಲಿಯೇ ಉತ್ತಮ ಲಯ ಕಂಡುಕೊಂಡಿತು.19ನೇ ಓವರ್‌ನಲ್ಲಿ ನಿಶಾಮ್ ಎಸೆತಕ್ಕೆ ರಾಯ್ ವಿಕೆಟ್ ಒಪ್ಪಿಸಿದರು. ಆಮೇಲೆ ಬೆಸ್ಟೊಗೆ ಜತೆಯಾಗಿದ್ದು ಜೋ ರೂಟ್. 25 ಎಸೆತಗಳಲ್ಲಿ 24 ರನ್ ಬಾರಿಸಿದ ರೂಟ್, ಟ್ರೆಂಟ್ ಬೌಲ್ಟ್ ಎಸೆತಕ್ಕೆ ಟಾಮ್ ಲಥಾಮ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ನಂತರ ಬಂದ ಬಟ್ಲರ್ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.ಬಟ್ಲರ್ ವಿಕೆಟ್ ಕಬಳಿಸಿದ್ದು ಕೂಡಾ ಬೌಲ್ಟ್.

ಆರಂಭಿಕ ದಾಂಡಿಗರು ಉತ್ತಮ ಆರಂಭ ಕೊಟ್ಟಿದ್ದರೂ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿನ ಆಟಗಾರರ ಪ್ರದರ್ಶನ ಕಳಪೆಯಾಗಿತ್ತು. ಇದು ರನ್ ಗತಿ ಮೇಲೂ ಪರಿಣಾಮ ಬೀರಿತು.

ಕ್ಷಣಕ್ಷಣದ ಸ್ಕೋರ್‌:https://bit.ly/2JjpaXa

ಆಮೇಲೆ ಕಣಕ್ಕಿಳಿದ ಮೋರ್ಗನ್-ಬೆನ್ ಸ್ಟೋಕ್ಸ್ ಜೋಡಿ ಭರವಸೆ ಹುಟ್ಟಿಸಿದ್ದರೂ 42ನೇ ಓವರ್‌ನಲ್ಲಿ ಸ್ಟೋಕ್ಸ್ ಸ್ಯಾಂಟನರ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕ್ರಿಸ್ ವೋಕ್ಸ್ (4) ಔಟಾದಾಗ ತಂಡಕ್ಕೆ ಆಸರೆಯಾಗಿ ಉಳಿದದ್ದು ಮೋರ್ಗನ್ ಮಾತ್ರ. ಆದರೆ ಹೆನ್ರಿ ಅವರ ಬೌಲಿಂಗ್‌ಗೆ ಮೋರ್ಗನ್ (42) ವಿಕೆಟ್ ಕಳೆದುಕೊಂಡರು. ಕೊನೆಯ ಹತ್ತು ಓವರ್ ಕಿವೀಸ್ ತಂಡ ಕರಾರುವಕ್ಕಾಗಿ ಬೌಲಿಂಗ್ ದಾಳಿ ನಡೆಸುವ ಮೂಲಕ ಇಂಗ್ಲೆಂಡ್‌ನ ರನ್ ಓಟಕ್ಕೆ ತಡೆಯೊಡ್ಡಿತು.

ಕೊನೆಯ ಓವರ್‌ನಲ್ಲಿ ಸೌಥೀ ಎಸೆತಕ್ಕೆ ರಶೀದ್ ಔಟಾಗಿದ್ದು,ಲಿಯಾನ್ ಫ್ಲೆಂಕೆಟ್ (15) ಮತ್ತು ಆರ್ಚರ್ ಔಟಾಗದೆ (1) ಉಳಿದಿದ್ದಾರೆ.
ನ್ಯೂಜಿಲೆಂಡ್ ಪರ ಬೌಲ್ಟ್ - 2, ನಿಶಾಮ್ -2 , ಹೆನ್ರಿ-2 ಸ್ಯಾಂಟನರ್ ಮತ್ತು ಸೌಥೀ ತಲಾ 1 ವಿಕೆಟ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT