ಶನಿವಾರ, ಜುಲೈ 31, 2021
24 °C
ಬ್ರಾಥ್‌ವೇಟ್ ಅರ್ಧಶತಕ

ಮ್ಯಾಂಚೆಸ್ಟರ್ ಟೆಸ್ಟ್‌ ಕ್ರಿಕೆಟ್: ಬ್ರಾಡ್ ಚುರುಕಿನ ದಾಳಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

england test cricket Manchester

ಮ್ಯಾಂಚೆಸ್ಟರ್: ಇಲ್ಲಿಯ ಎಮಿರೇಟ್ಸ್‌ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಭಾನುವಾರ ಸೂರ್ಯನ ಕಿರಣಗಳು ನಳನಳಿಸಿದವು. ಇದರಿಂದಾಗಿ ಕ್ರಿಕೆಟ್‌ ಸೊಬಗು ಮತ್ತೆ ಅರಳಿತು.

ಕೊರೊನಾ ಕಾಲದ  ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ವೇಗಿ ಸ್ಟುವರ್ಟ್‌ ಬ್ರಾಡ್‌ (66ಕ್ಕೆ3) ಅವರ ಪರಿಣಾಮಕಾರಿ ದಾಳಿ ರಂಗೇರಿತು. ಮೊದಲ ಟೆಸ್ಟ್‌ನಲ್ಲಿ ಸ್ಥಾನ ಪಡೆಯದ ಕಾರಣ ಅಸಮಾಧಾನಗೊಂಡಿದ್ದ ಬ್ರಾಡ್, ಎರಡನೇ ಟೆಸ್ಟ್‌ನಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇದರಿಂದಾಗಿ ವಿಂಡೀಸ್‌ ಹೋರಾಟಕ್ಕೆ ಕಡಿವಾಣ ಬಿದ್ದಿತು.

ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ಕ್ರೇಗ್ ಬ್ರಾಥ್‌ವೇಟ್ (75; 165 ಎಸೆತ) ಮತ್ತು ಶಾಮ್ರಾ ಬ್ರೂಕ್ಸ್‌ (68; 137) ಅವರ ತಾಳ್ಮೆಯ ಅರ್ಧಶತಕಗಳ ಹೋರಾಟವಿದ್ದರೂ ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿತು.  ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು ಗಳಿಸಿದ 469 ರನ್‌ಗಳಿಗೆ ಉತ್ತರವಾಗಿ 99 ಓವರ್‌ಗಳಲ್ಲಿ 287 ರನ್‌ಗೆ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಎರಡನೇ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್‌ 4 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 17 ರನ್‌ ಗಳಿಸಿತ್ತು.

ಶನಿವಾರ ಪಂದ್ಯದ ಮೂರನೇ  ದಿನದಾಟವು ಮಳೆಗೆ ಕೊಚ್ಚಿಹೋಗಿತ್ತು. ಮೊದಲ ಎರಡು ದಿನಗಳಲ್ಲಿ ಬೆನ್ ಸ್ಟೋಕ್ಸ್ ಮತ್ತು ಡಾಮ್ ಸಿಬ್ಲಿ ಅವರ ಅಮೋಘ ಶತಕಗಳ ಬಲದಿಂದ ಇಂಗ್ಲೆಂಡ್ ತಂಡವು ದೊಡ್ಡ ಮೊತ್ತ ಪೇರಿಸಿ ಡಿಕ್ಲೇರ್
ಮಾಡಿಕೊಂಡಿತ್ತು.

 ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್: 162 ಓವರ್‌ಗಳಲ್ಲಿ 9ಕ್ಕೆ 469 ಡಿಕ್ಲೇರ್‌; ವೆಸ್ಟ್ ಇಂಡೀಸ್: 99 ಓವರ್‌ಗಳಲ್ಲಿ 255 (ಕ್ರೇಗ್ ಬ್ರಾಥ್‌ವೇಟ್ 75, ಅಲ್ಜರಿ ಜೋಸೆಫ್ 32, ಶಾಯ್ ಹೋಪ್ 26, ಶಾಮ್ರಾ ಬ್ರೂಕ್ಸ್‌ 68, ರಾಸ್ಟನ್ ಚೇಸ್ ಬ್ಯಾಟಿಂಗ್ 51, ಸ್ಯಾಮ್ ಕರನ್ 70ಕ್ಕೆ2, ಸ್ಟುವರ್ಟ್ ಬ್ರಾಡ್ 66ಕ್ಕೆ3, ಡಾಮ್ನಿಕ್ ಬೆಸ್ 67ಕ್ಕೆ1, ಬೆನ್ ಸ್ಟೋಕ್ಸ್‌ 29ಕ್ಕೆ1) ವಿವರ ಅಪೂರ್ಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು