ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡರೇಷನ್‌ ಕ್ರಿಕೆಟ್‌ ಲೀಗ್‌ ಸ್ನೇಹಪರ ಟೂರ್ನಿ ನಾಳೆಯಿಂದ

Last Updated 15 ಡಿಸೆಂಬರ್ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ಚೇಂಜ್‌ಮೇಕರ್ಸ್‌ ಆಫ್‌ ಕನಕಪುರ ರೋಡ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಡಿ.17 ಮತ್ತು 18 ರಂದು ಸ್ನೇಹಪರ ಕ್ರಿಕೆಟ್‌ ಟೂರ್ನಿ ‘ಫೆಡರೇಷನ್‌ ಕ್ರಿಕೆಟ್‌ ಲೀಗ್‌’ ಆಯೋಜಿಸಲಾಗಿದೆ.

ಕನಕಪುರ ರಸ್ತೆಯ ಸಾರಕ್ಕಿಯಿಂದ ಕಗ್ಗಲೀಪುರದವರೆಗೆ ಹರಡಿಕೊಂಡಿರುವ ಬಡಾವಣೆಗಳು ಮತ್ತು ಅಪಾರ್ಟ್‌ಮೆಂಟ್‌ಗಳ ನೂರಕ್ಕೂ ಹೆಚ್ಚು ಕ್ಷೇಮಾಭಿವೃದ್ಧಿ ಸಂಘಗಳು ಈ ಟೂರ್ನಿಗೆ ಕೈಜೋಡಿಸಿದ್ದು, 30 ತಂಡಗಳು ಪಾಲ್ಗೊಳ್ಳಲಿವೆ.

ಕನಕಪುರ ರಸ್ತೆಯ ಜುಡಿಷಿಯಲ್‌ ಬಡಾವಣೆ ಮತ್ತು ಗುಬ್ಬಲಾಳದ ಸಿಟಿ ಎಂಜಿನಿಯರಿಂಗ್‌ ಕಾಲೇಜಿನ ಮೈದಾನ
ದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಅರ್ಹತಾ ಸುತ್ತು ಹಾಗೂ ನಾಕೌಟ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

ಅರ್ಜುನ ವರ ಜ್ಯುವೆಲರ್ಸ್‌ ಮತ್ತು ಕನಕಪುರ ರಸ್ತೆಯಲ್ಲಿರುವ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಟೂರ್ನಿಯ ಪ್ರಾಯೋಜಕತ್ವ ವಹಿಸಿಕೊಂಡಿವೆ. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಟೂರ್ನಿಯನ್ನು ಉದ್ಘಾಟಿಸುವರು ಎಂದು ಟೂರ್ನಿಯ ಸಂಘಟಕರಲ್ಲೊಬ್ಬರಾದ ಶ್ರೀವತ್ಸ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT