ಮಂಗಳವಾರ, ಮಾರ್ಚ್ 28, 2023
29 °C

Ind VS Eng 4th Test: ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಭಾರತ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಓವಲ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಖ್ಯಾತ ಕ್ರಿಕೆಟ್ ತರಬೇತುದಾರ ವಾಸುದೇವ್ ಪರಾಂಜಪೆ ಅವರ ಗೌರವಾರ್ಥವಾಗಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಳಕ್ಕಿಳಿದಿ್ದ್ದಾರೆ.

‘ಇತ್ತೀಚೆಗೆ ನಿಧನರಾದ ವಾಸುದೇವ್ ಪರಾಂಜಪೆ ಅವರಿಗೆ ಸಂತಾಪ ಸೂಚಿಸುವ ಉದ್ದೇಶದಿಂದ ಟೀಮ್ ಇಂಡಿಯಾ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿದೆ’ ಎಂದು ಟ್ವೀಟ್ ಮಾಡಿರುವ ಬಿಸಿಸಿಐ, ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವಾಗ ಕಪ್ಪು ಪಟ್ಟಿ ಧರಿಸಿ ತಂಡದ ಆಟಗಾರರು ನಿಂತಿರುವ ಚಿತ್ರವನ್ನು ಹಂಚಿಕೊಂಡಿದೆ.

ತಮ್ಮ ತಂದೆಗೆ ಟೀಮ್ ಇಂಡಿಯಾ ಅರ್ಪಿಸಿದ ಗೌರವವನ್ನು ಪರಾಂಜಪೆ ಅವರ ಮಗ ಜತಿನ್ ಪರಾಂಜಪೆ ಶ್ಲಾಘಿಸಿದರು. ‘ಪರಾಂಜಪೆ ಕುಟುಂಬವು ಈ ಗೌರವಕ್ಕೆ ಆಭಾರಿಯಾಗಿದೆ’ಎಂದು ಅವರು ಬರೆದುಕೊಂಡಿದ್ದಾರೆ.

ಪರಾಂಜಪೆ ಅವರ ಮಗ ಜತಿನ್ ಭಾರತದ ಪರ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದರು. ಇತ್ತೀಚೆಗೆ ರಾಷ್ಟ್ರೀಯ ತಂಡದ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ್ದರು. ದಾದರ್ ಯೂನಿಯನ್ ಕ್ರಿಕೆಟ್ ಕ್ಲಬ್‌ನ ಕ್ಯಾಪ್ಟನ್ ಆಗಿದ್ದರು

ಮುಂಬೈ ಮತ್ತು ಬರೋಡಾ ತಂಡಗಳನ್ನು ಪರಾಂಜಪೆ ಪ್ರತಿನಿಧಿಸಿದ್ದರು. 29 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 785 ರನ್ ಗಳಿಸಿದ್ದಾರೆ. ಆದರೆ, ಕ್ರಿಕೆಟ್ ವಲಯದಲ್ಲಿ ಅವರು ತರಬೇತುದಾರರಾಗಿ ಹೆಚ್ಚು ಹೆಸರುವಾಸಿಯಾಗಿದ್ದರು.

ಸುನಿಲ್ ಗವಾಸ್ಕರ್ ಮತ್ತು ದಿಲೀಪ್ ವೆಂಗ್‌ಸರ್ಕರ್‌ರಿಂದ ಹಿಡಿದು ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ರೋಹಿತ್ ಶರ್ಮಾ ವರೆಗೂ, ಪರಾಂಜಪೆ ಅವರು ತಮ್ಮ ಮಾರ್ಗದರ್ಶನದ ಮೂಲಕ ಪ್ರಭಾವ ಬೀರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು