ಭಾನುವಾರ, ಏಪ್ರಿಲ್ 18, 2021
31 °C

ಗವಾಸ್ಕರ್ ಈಗಲೂ ನನ್ನ ಹೀರೊ: ಸಚಿನ್ ತೆಂಡೂಲ್ಕರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪ್ರತಿಯೊಬ್ಬ ಸಾಧಕನಿಗೆ ಒಬ್ಬ ಹೀರೊ ಇರುತ್ತಾರೆ. ಅವರಿಂದ ಸ್ಫೂರ್ತಿ ಪಡೆದು ಸಾಧನೆಯ ಹಾದಿ ತುಳಿದಿರುತ್ತಾರೆ. ಅದೇ ರೀತಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಹೀರೊ ಗವಾಸ್ಕರ್. ಬಾಲ್ಯದಲ್ಲಿ ಸುನಿಲ್ ಗವಾಸ್ಕರ್ ಅವರ ಆಟವನ್ನು ಆರಾಧಿಸುತ್ತಾ ಬೆಳೆದ ಸಚಿನ್ ಅವರಂತೆ ಆಗಬೇಕೆಂದುಕೊಂಡಿದ್ದರಂತೆ. ಭಾರತದ 'ಲಿಟಲ್ ಮಾಸ್ಟರ್' ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ 50 ವರ್ಷ ಮುಗಿದಿದ್ದು, ಸಚಿನ್ ತಮ್ಮ ಹೀರೊಗೆ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.

"50 ವರ್ಷಗಳ ಹಿಂದೆ ಈ ದಿನ ಅವರು ಕ್ರಿಕೆಟ್ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದರು. ತಮ್ಮ ಚೊಚ್ಚಲ ಸರಣಿಯಲ್ಲಿ 774 ರನ್ ಗಳಿಸಿದರು. ಅವರ ಆಟ ನೋಡಿ ಬೆಳೆಯುತ್ತಿದ್ದ ನಮ್ಮ ಕಾಲದ ಪ್ರತಿಯೊಬ್ಬರಿಗೂ ಅವರು ಹೀರೊ ಆಗಿದ್ದರು." ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

"ಗವಾಸ್ಕರ್ ಪದಾರ್ಪಣೆ ಬಳಿಕ ಭಾರತವು ವೆಸ್ಟ್ ಇಂಡೀಸ್, ನಂತರ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದುಕೊಂಡಿತು. ಇದ್ದಕ್ಕಿದ್ದಂತೆ ಭಾರತದಲ್ಲಿ ಕ್ರೀಡೆಯು ಹೊಸ ಅರ್ಥವನ್ನು ಪಡೆದುಕೊಂಡಿತು. ಚಿಕ್ಕ ವಯಸ್ಸಿನಿಂದ ನಾನು ಅವರನ್ನು ನೋಡಬೇಕು ಮತ್ತು ಅವರಂತೆ ಆಗಬೇಕೆಂದು ಪ್ರಯತ್ನಿಸುತ್ತಿದ್ದೆ. ಅದು ಈಗಲೂ ಬದಲಾಗಿಲ್ಲ. ಅವರು ಈಗಲೂ ನನ್ನ ಹೀರೋ ಆಗಿಯೇ ಉಳಿದಿದ್ದಾರೆ. ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 50 ವರ್ಷ ಮುಗಿಸಿದ ಗವಾಸ್ಕರ್ ಅವರೇ ನಿಮಗೆ ಶುಭಾಶಯ’ ಎಂದು ಟ್ವೀಟ್ ಮಾಡಿದ್ದಾರೆ.

ಅಂದು ಗವಾಸ್ಕರ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ದಿವಂಗತ ಅಜಿತ್ ವಾಡೆಕರ್ ನೇತೃತ್ವದ ಭಾರತ ತಂಡವು ವೆಸ್ಟ್ ಇಂಡೀಸ್‌ನಲ್ಲಿ 1-0 ಅಂತರದಿಂದ ಸರಣಿ ಗೆದ್ದುಕೊಂಡಿತು. ಅದಾದ ಕೆಲವೇ ತಿಂಗಳುಗಳಲ್ಲಿ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದುಕೊಂಡಿತು.

1971 ರ ಇಡೀ ತಂಡವು ದೇಶವನ್ನು ಹೆಮ್ಮೆ ಪಡುವಂತೆ ಮಾಡಿತು ಮತ್ತು ನಮಗೆಲ್ಲ ಬೆಳಕನ್ನು ತೋರಿಸಿತ್ತು ಎಂದು ಸಚಿನ್ ಹೇಳಿದ್ದಾರೆ.

"1971 ರ ತಂಡದಲ್ಲಿದ್ದ ಎಲ್ಲರಿಗೂ 50 ನೇ ವಾರ್ಷಿಕೋತ್ಸವದ ಶುಭಾಶಯಗಳು. ನೀವೆಲ್ಲರೂ ನಮಗೆ ಹೆಮ್ಮೆ ತಂದಿದ್ದೀರಿ ಮತ್ತು ನಮಗೆ ಬೆಳಕನ್ನು ತೋರಿಸಿದ್ದೀರಿ" ಎಂದು ಸಚಿನ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು