ದಿನ ಭವಿಷ್ಯ: ಸೆಪ್ಟೆಂಬರ್ 21 ಗುರುವಾರ 2023- ಇಂದು ಈ ರಾಶಿಯವರಿಗೆ ಒತ್ತಡ ಕಡಿಮೆ
Published 20 ಸೆಪ್ಟೆಂಬರ್ 2023, 18:56 IST
ಪ್ರಜಾವಾಣಿ ವಿಶೇಷ
ಮೇಷ
ನೀವು ತೋರಿದ ಸಾಮಾಜಿಕ ಕಳಕಳಿಗಾಗಿ ಸಂಘ ಸಂಸ್ಥೆಗಳವರು ನಿಮ್ಮನ್ನು ಸಮಾಜದ ಆಸ್ತಿ ಎಂದು ಪರಿಗಣಿಸಲಿದ್ದಾರೆ. ವ್ಯವಸಾಯಗಾರರಿಗೆ ಕೃಷಿ ಕೆಲಸ ಕಾರ್ಯಗಳು ಹೆಚ್ಚಲಿದೆ. ವೃತ್ತಿಯಲ್ಲಿ ಸಾಕಷ್ಟು ಪೈಪೋಟಿ ಎದುರಿಸುವಿರಿ.
20 ಸೆಪ್ಟೆಂಬರ್ 2023, 18:56 IST
ವೃಷಭ
ಅಡ್ಡದಾರಿಗಳನ್ನು ಹಿಡಿಯದೆ ನಿಯಮಬದ್ಧವಾಗಿ ಹುರುಪಿನಿಂದ ಕೆಲಸ ಕಾರ್ಯಗಳನ್ನು ಪೂರ್ತಿಗೊಳಿಸಿ. ತಂತ್ರಜ್ಞಾನಿಗಳಿಗೆ ವೃತ್ತಿಯಲ್ಲಿ ಪ್ರಸ್ತುತವಾಗಿ ಇರುವ ಮೇಲಧಿಕಾರಿಗಳ ಒತ್ತಡಗಳು ಕಡಿಮೆಯಾಗಲಿದೆ.
20 ಸೆಪ್ಟೆಂಬರ್ 2023, 18:56 IST
ಮಿಥುನ
ಚಿತ್ರ ವಿತರಕರಿಗೆ ಹೆಚ್ಚಿನ ವರಮಾನ ಅಥವಾ ಪ್ರಶಸ್ತಿ ಹಾಗೂ ಪುರಸ್ಕಾರ ದೊರೆಯುವ ಸಂಭವ ಇದೆ. ಆರೋಗ್ಯದ ಬಗ್ಗೆ ಮತ್ತು ಆಹಾರದ ಬಗ್ಗೆ ಕಾಳಜಿ ವಹಿಸಿ. ಮನರಂಜನೆಗಾಗಿ ಹಣ ವ್ಯಯ ಮಾಡುವುದು ಸರಿಯಲ್ಲ.
20 ಸೆಪ್ಟೆಂಬರ್ 2023, 18:56 IST
ಕರ್ಕಾಟಕ
ಮೂರು, ನಾಲ್ಕು ಕಾರ್ಯಗಳ ಅಥವಾ ವಿಚಾರಗಳಲ್ಲಿನ ನಿಮ್ಮ ಗಮನದಿಂದ, ಕೆಲಸದಲ್ಲಿ ಕೊನೆಯ ಹಂತ ತಲುಪುವುದು ಕಷ್ಟಕರವೆನಿಸುವುದು. ಶಿವನ ಆರಾಧನೆಯಿಂದ ಅಭೀಷ್ಟ ಪ್ರಾಪ್ತಿಯಾಗಿ ಶುಭವಾಗುವುದು.
20 ಸೆಪ್ಟೆಂಬರ್ 2023, 18:56 IST
ಸಿಂಹ
ಖರ್ಚುಗಳಿಗೆ ತಕ್ಕ ಆದಾಯವಿರುವುದರಿಂದ ಸಮಾಧಾನಕರ ವಾತಾವರಣ ಇರುವುದು. ನ್ಯಾಯವಾದಿಗಳಿಗೆ ಸುಲಭದಲ್ಲಿ ಜಯಪ್ರಾಪ್ತಿಯಾಗಲು ಸತ್ಯ ಮಾರ್ಗದಲ್ಲಿದ್ದರಷ್ಟೇ ಸಾಧ್ಯ. ಮಕ್ಕಳಿಂದ ನೆಮ್ಮದಿ ದೊರೆಯಲಿದೆ.
20 ಸೆಪ್ಟೆಂಬರ್ 2023, 18:56 IST
ಕನ್ಯಾ
ಕಿರುತೆರೆ ಕಲಾವಿದರಿಗೆ ವಿಫುಲ ಅವಕಾಶಗಳು ಒದಗಲಿದೆ. ಅಧಿಕ ಪ್ರಯಾಣಗಳು ಜತೆಯಲ್ಲಿ ದೇಹಾಯಾಸ ಕಂಡು ಬಂದರೂ ಕಾರ್ಯಾನುಕೂಲವಾಗಿ ಧನ ಲಾಭ ಉಂಟಾಗಲಿದೆ. ವಾಹನಗಳಿಂದ ಲಾಭ ಪಡೆಯಬಹುದು.
20 ಸೆಪ್ಟೆಂಬರ್ 2023, 18:56 IST
ತುಲಾ
ಶಾಂತಿ ಪಡೆಯಲು ಜಗವನ್ನು ಬೆಳಗುವ ಸೂರ್ಯನಾರಾಯಣನನ್ನು ನಮಸ್ಕರಿಸಿ, ಪ್ರಾರ್ಥಿಸಿ. ಮುಂದಿನ ಶುಭಕಾರ್ಯಗಳ ಬಗ್ಗೆ ಹಿರಿಯರೊಡನೆ ಸಮಾಲೋಚನೆ ನಡೆಸಿ. ಸಂಜೆಯ ಸಮಯದಲ್ಲಿ ದೇಹಾಲಸ್ಯ ಕಂಡುಬರಲಿದೆ.
20 ಸೆಪ್ಟೆಂಬರ್ 2023, 18:56 IST
ವೃಶ್ಚಿಕ
ಹಳೆಯ ಕೆಲಸಕ್ಕಿಂತ ಹೊಸ ಉದ್ಯೋಗದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದ್ದು, ಕೆಲಸದ ವೇಳೆಯೂ ನಿಮಗೆ ಅನುಕೂಲವಾಗಿರುತ್ತದೆ. ಬಟ್ಟೆಯ ವ್ಯಾಪಾರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಬಹುದು. ಹಣದ ಬಗ್ಗೆ ಚಿಂತೆ ಬೇಡ.
20 ಸೆಪ್ಟೆಂಬರ್ 2023, 18:56 IST
ಧನು
ಕಾರ್ಖಾನೆ ವೃತ್ತಿಯವರಿಗೆ ಲಾಭ ಇಲ್ಲವಾದರೂ, ದೈನಂದಿನ ನೆಮ್ಮದಿ, ಸಂತೋಷಕ್ಕಾಗಲಿ ಯಾವುದೇ ತೊಂದರೆ ಇರಲಾರದು. ಸಹೋದರರ ಕಾರ್ಯಗಳಿಗೋಸ್ಕರ ಅಧಿಕ ಸುತ್ತಾಟವಾದರೂ ನೆಮ್ಮದಿ ಸಿಗಲಿದೆ.
20 ಸೆಪ್ಟೆಂಬರ್ 2023, 18:56 IST
ಮಕರ
ಬಟ್ಟೆ ವ್ಯಾಪಾರಿಗಳು , ಪತ್ರಿಕೆಯವರ ಸಹಕಾರದಿಂದ ಹೆಚ್ಚಿನ ಪ್ರಚಾರ ತೆಗೆದುಕೊಳ್ಳಬಹುದು. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಪ್ರವಾಸದ ಯೋಜನೆಗಳನ್ನು ಹಾಕುವಿರಿ. ಕೆಲಸದಲ್ಲಿ ಪ್ರಶಂಸೆ ಸಿಗುವುದು.
20 ಸೆಪ್ಟೆಂಬರ್ 2023, 18:56 IST
ಕುಂಭ
ಮಾತಿನಿಂದ, ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಲಾಭ ಕಾಣಲಿದ್ದೀರಿ. ಹೊಸ ಕೆಲಸಗಳನ್ನು ಶುರು ಮಾಡುಲು ಒಳ್ಳೆಯ ದಿನ. ಶ್ರೀ ವೀರಾಂಜನೇಯ ಸ್ತೋತ್ರ ಪಠಿಸಿದರೆ ಮಾನಸಿಕ ಧೈರ್ಯ ವೃದ್ಧಿಯಾಗುವುದು.
20 ಸೆಪ್ಟೆಂಬರ್ 2023, 18:56 IST
ಮೀನ
ಸ್ವಾರ್ಥದ ಕೆಲವು ನಿರ್ಧಾರದ ಫಲವಾಗಿ ಬಂಧುಗಳು ಅಥವಾ ಆತ್ಮೀಯರು ದೂರವಾಗುವ ಲಕ್ಷಣಗಳಿದೆ. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ. ಕುಟುಂಬದಲ್ಲಿ ಪ್ರೀತಿ ವಿಶ್ವಾಸ ನಿರೀಕ್ಷಿಸಬಹುದು.