ಮಹಿಳೆಯರ ಟ್ವೆಂಟಿ–20 ವಿಶ್ವಕಪ್: ಸ್ಮೃತಿ ಮಂದಾನ ಅಮೋಘ ಅರ್ಧಶತಕ

7
ಆಸ್ಟ್ರೇಲಿಯಾ ಎದುರಿನ ಪಂದ್ಯ: ತಾನಿಯಾ, ಜೆಮಿಮಾ ರಾಡ್ರಿಗಸ್ ವೈಫಲ್ಯ

ಮಹಿಳೆಯರ ಟ್ವೆಂಟಿ–20 ವಿಶ್ವಕಪ್: ಸ್ಮೃತಿ ಮಂದಾನ ಅಮೋಘ ಅರ್ಧಶತಕ

Published:
Updated:
Deccan Herald

ಪ್ರಾವಿಡೆನ್ಸ್‌, ಗಯಾನ: ಮೂರು ಪಂದ್ಯಗಳಲ್ಲಿ ಸತತವಾಗಿ ಗೆದ್ದಿರುವ ಭಾರತ ತಂಡ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಉತ್ತಮ ಮೊತ್ತ ಗಳಿಸಿದೆ.

ಶನಿವಾರ ರಾತ್ರಿ ನಡೆದ ‘ಬಿ’ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದವರು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಎರಡನೇ ಓವರ್‌ನಲ್ಲಿ ಆರಂಭಿಕ ಆಟಗಾರ್ತಿ ತಾನಿಯಾ ಭಾಟಿಯಾ ಅವರ ವಿಕೆಟ್ ಕಳೆದುಕೊಂಡಾಗ ಹರ್ಮನ್‌ಪ್ರೀತ್ ಕೌರ್ ಬಳಗ ಆತಂಕಕ್ಕೆ ಒಳಗಾಯಿತು. ಆದರೆ ಜೆಮಿಮಾ ರಾಡ್ರಿಗಸ್ ಜೊತೆಗೂಡಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ಎದುರಾಳಿ ಬೌಲರ್‌ಗಳ ಸದ್ದಡಗಿಸಿದರು.

ರಾಡ್ರಿಗಸ್‌ ಕೇವಲ ಆರು ರನ್ ಗಳಿಸಿ ಔಟಾದಾಗ ತಂಡದ ಮೊತ್ತ 49 ರನ್ ಆಗಿತ್ತು. ನಂತರ ಕ್ರೀಸ್‌ಗೆ ಬಂದ ಹರ್ಮನ್‌ಪ್ರೀತ್ ಕೌರ್‌ ಕೂಡ ಆಸ್ಟ್ರೇಲಿಯಾ ಬೌಲರ್‌ಗಳನ್ನು ದಂಡಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 68 ರನ್ ಸೇರಿಸಿದರು.

62 ರನ್‌ ಗಳಿಸಿದ್ದಾಗ ಎಲ್‌ಬಿಡಬ್ಲ್ಯು ಅಪಾಯದಿಂದ ತ‍‍ಪ್ಪಿಸಿಕೊಂಡ ಮಂದಾನ ನಂತರವೂ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರು. ಕೌರ್‌ 43 ರನ್‌ ಗಳಿಸಿ ಔಟಾದ ನಂತರ ಬೇಗನೇ ವಿಕೆಟ್‌ಗಳು ಉರುಳಿದವು. ಮಂದಾಬ ಬ್ಯಾಟಿಂಗ್ ಮುಂದುವರಿಯಿತು. ಮಿಥಾಲಿ ರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

ಸಂಕ್ಷಿಪ್ತ ಸ್ಕೋರು: ಭಾರತ: 16 ಓವರ್‌ಗಳಲ್ಲಿ 4ಕ್ಕೆ 136 (ಸ್ಮೃತಿ ಮಂದಾನ 70, ಹರ್ಮನ್‌ಪ್ರೀತ್‌ ಕೌರ್‌ 43; ಗಾರ್ಡನರ್‌ 25ಕ್ಕೆ2, ಕಿಮಿನ್ಸ್‌ 25ಕ್ಕೆ2) ವಿವರ ಅಪೂರ್ಣ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !