ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ Test Cricket: ಎರಡನೇ ಟೆಸ್ಟ್‌ ಡ್ರಾನಲ್ಲಿ ಅಂತ್ಯ

ಕ್ರಿಕೆಟ್‌: ಭಾರತ ‘ಎ’, ನ್ಯೂಜಿಲೆಂಡ್‌ ‘ಎ’ ನಡುವಣ ಪಂದ್ಯ
Last Updated 11 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾರತ ‘ಎ’ ಹಾಗೂ ನ್ಯೂಜಿಲೆಂಡ್‌ ‘ಎ’ ತಂಡಗಳ ನಡುವಣ ನಾಲ್ಕು ದಿನಗಳ ‘ಟೆಸ್ಟ್‌’ ಪಂದ್ಯ ಭಾನುವಾರ ಡ್ರಾನಲ್ಲಿ ಅಂತ್ಯ ಕಂಡಿತು.

ಪಂದ್ಯದ ಕೊನೆಯ ದಿನವೂ ಮಳೆಯ ಆಟವಿತ್ತು. ಆದರೆ ತುಸು ಹೊತ್ತು ನಿಂತಿದ್ದರಿಂದ ಒಂದಿಷ್ಟು ಆಟ ನಡೆಯಲು ಸಾಧ್ಯವಾಯಿತು. ಮಧ್ಯಾಹ್ನ ಆರಂಭವಾಗುವ ಹೊತ್ತಿಗೆ ಇನಿಂಗ್ಸ್‌ ಡಿಕ್ಲೇರ್‌ ಘೋಷಿಸಿದ ಭಾರತ, ಪ್ರವಾಸಿ ಬಳಗವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ಎರಡು ಸಲ ಮಳೆ ಬಂದು ಹೋಗುವ ಮುನ್ನ 63 ನಿಮಿಷಗಳ ಆಟ ನಡೆಯಿತು. 12.5 ಓವರ್‌ಗಳಲ್ಲಿ ಕಿವೀಸ್‌ ತಂಡವು 2 ವಿಕೆಟ್‌ ನಷ್ಟಕ್ಕೆ 39 ರನ್‌ಗಳಿಸಿ ಆಡುತ್ತಿದ್ದಾಗ 2ನೇ ಸಲ ಮಳೆ ಸುರಿಯಿತು. ನಂತರ ಆಟ
ನಡೆಯಲಿಲ್ಲ.

ಇದಕ್ಕೂ ಆತಿಥೇಯ ತಂಡದ ವೇಗಿಗಳು ಮೊನಚಿನ ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಐದು ವಿಕೆಟ್‌ ಗಳಿಸಿದ್ದ ಮುಕೇಶಕುಮಾರ್, ಜೋ ಕಾರ್ಟರ್‌(17; 37ಎ, 4x3) ವಿಕೆಟ್‌ ಪಡೆದು ಸಂಭ್ರಮಿಸಿದರು. ಬೆಂಗಳೂರಿನ ಪಂದ್ಯದಲ್ಲಿ 197 ರನ್‌ ಗಳಿಸಿದ್ದ ಕಾರ್ಟರ್‌, ‌9.5ನೇ ಓವರ್‌ನಲ್ಲಿ ವಿಕೆಟ್‌ ಕೀಪರ್‌ ಕೆ.ಎಸ್‌.ಭರತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಬಳಿಕ ಬಂದ ಡೇನ್‌ ಕ್ಲೆವರ್‌(1 ರನ್‌,10ಎಸೆತ) ಹೆಚ್ಚು ಹೊತ್ತು ನಿಲ್ಲಲಿಲ್ಲ. ಶಾರ್ದೂಲ್‌ ಟಾಕೂರ್ ಬೌಲಿಂಗ್‌ನಲ್ಲಿ ಕ್ಲೆವರ್‌ ಗಲ್ಲಿಯಲ್ಲಿದ್ದ ತಿಲಕ್‌ ವರ್ಮಾಗೆ ಕ್ಯಾಚಿತ್ತರು.

ನಾಲ್ಕು ದಿನಗಳ ಈ ಪಂದ್ಯ ಮೊದಲ ದಿನ ಹಾಗೂ ಮೂರನೇ ದಿನದ ಆಟ ಮಳೆಯಿಂದ ರದ್ದಾಗಿತ್ತು. 2ನೇ ದಿನ 66 ಓವರ್‌ ಆಟ ನಡೆದಿತ್ತು.

ಸಂಕ್ಷಿಪ್ತ ಸ್ಕೋರ್‌: ಭಾರತ ಮೊದಲ ಇನಿಂಗ್ಸ್‌: 66 ಓವರ್‌ಗಳಲ್ಲಿ 6 ವಿಕೆಟ್‌ಗೆ 229 ರನ್‌. ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌: 12.5 ಓವರ್‌ಗಳಲ್ಲಿ 2 ವಿಕೆಟ್‌ಗೆ 39 ರನ್‌(ಜೋ ಕಾರ್ಟರ್‌ 17ರನ್‌, ರಚಿನ್‌ ರವೀಂದ್ರ ನಾಟೌಟ್ 14). ಭಾರತ ಬೌಲಿಂಗ್‌– ಮುಕೇಶಕುಮಾರ್‌ 2ಕ್ಕೆ1, ಶಾರ್ದೂಲ್‌ 19ಕ್ಕೆ1).

ಫಲಿತಾಂಶ: ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT