ಲಂಡನ್: ಜೋಕಾಲಿಯಂತೆ ಅತ್ತಿಂದಿತ್ತ ಜೀಕಾಡಿದ ಜಯವು ಕಡೆಗೂ ಭಾರತಕ್ಕೆ ಒಲಿಯಿತು. ‘ಸಿಂಹದ ಗುಂಡಿಗೆ’ಯ ಬೌಲರ್ ಮೊಹಮ್ಮದ್ ಸಿರಾಜ್ ಅವರ ಬಿರುಗಾಳಿ ವೇಗದ ದಾಳಿಯಿಂದಾಗಿ ಭಾರತ ತಂಡವು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿತು.

ಓವಲ್ ಕ್ರೀಡಾಂಗಣದಲ್ಲಿ ನಡೆದ ಆ್ಯಂಡರ್ಸನ್–ತೆಂಡೂಲ್ಕರ್ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವು 6 ರನ್ಗಳಿಂದ ಜಯಿಸಿತು. ಆತಿಥೇಯ ತಂಡದ ಸರಣಿ ಗೆಲುವಿನ ಕನಸು ಕಮರಿತು.

31 ವರ್ಷ ವಯಸ್ಸಿನ ಸಿರಾಜ್ ಅವರು ಸೋಮವಾರ ಬೆಳಿಗ್ಗೆ ತಮ್ಮ ಸ್ವಿಂಗ್ ದಾಳಿಯ ಚಾಕಚಕ್ಯತೆಯನ್ನು ಮೆರೆದರು. ಇಂಗ್ಲೆಂಡ್ ತಂಡವು 3–1ರಿಂದ ಸರಣಿ ಜಯಿಸಲು 35 ರನ್ಗಳ ಅಗತ್ಯವಿತ್ತು. ನಾಲ್ಕು ವಿಕೆಟ್ಗಳು ಮಾತ್ರ ಬಾಕಿಯಿದ್ದವು. ಆದರೆ ಸಿರಾಜ್ ಅವರ ಮಿಂಚಿನಂತ ಸ್ಪೆಲ್ನಿಂದಾಗಿ ಭಾರತ ತಂಡವು ಪಂದ್ಯ ಗೆದ್ದು ಸರಣಿಯನ್ನು 2–2ರಿಂದ ಸಮಬಲ ಮಾಡಿಕೊಂಡಿತು. ‘ಹೌಸ್ಫುಲ್’ ಆಗಿದ್ದ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಾಯಕರು ಟ್ರೋಫಿ ಹಂಚಿಕೊಂಡರು.

ಈ ಸರಣಿಯ ಕಳೆದ ನಾಲ್ಕು ಪಂದ್ಯಗಳಲ್ಲಿಯೂ ಐದನೇ ದಿನ ಫಲಿತಾಂಶ ಹೊರಹೊಮ್ಮಿತ್ತು. ಈ ಪಂದ್ಯವೂ ಕೊನೆಯ ದಿನ ಬೆಳಿಗ್ಗೆಯವರೆಗೂ ಲಂಬಿಸಿತ್ತು. ಹಲವು ಐತಿಹಾಸಿಕ ಪಂದ್ಯಗಳಿಗೆ ವೇದಿಕೆಯಾಗಿದ್ದ ಓವಲ್ ಕ್ರೀಡಾಂಗಣದಲ್ಲಿ ದಿನದಾಟ ಆರಂಭವಾಗುವ ಮುನ್ನವೇ ಜನರು ಬಂದಿದ್ದರು. ಕೆಲಸ, ಕಾರ್ಯಗಳ ಒತ್ತಡ ಎದ್ದು ಕಾಣಬೇಕಿದ್ದ ಸೋಮವಾರದ ಬೆಳಿಗ್ಗೆಯು ‘ಸ್ಪೋರ್ಟಿಂಗ್ ಸಂಡೇ’ ಯಂತೆ ಭಾಸವಾಗಿತ್ತು.

ಸಿರಾಜ್ (104ಕ್ಕೆ5) ಮತ್ತು ಪ್ರಸಿದ್ಧಕೃಷ್ಣ (126ಕ್ಕೆ4) ಅವರ ಅಮೋಘ ದಾಳಿಯನ್ನು ಆಸ್ವಾದಿಸಿದರು. ಉಭಯ ದೇಶಗಳ ಅಭಿಮಾನಿಗಳೂ ಈ ಗೆಲುವಿಗೆ ಮತ್ತು ಬೌಲರ್ಗಳ ಸಾಹಸಕ್ಕೆ ಮೆಚ್ಚುಗೆ ಚಪ್ಪಾಳೆ ತಟ್ಟಿ ಅಂಭಿನಂದಿಸಿದರು.

ದಿನದಾಟದ ಆರಂಭದಲ್ಲಿ ಕ್ರೀಸ್ನಲ್ಲಿದ್ದ ಜೆಮಿ ಓವರ್ಟನ್ ಅವರು ಪ್ರಸಿದ್ಧ ಅವರ ಮೊದಲ ಮೊದಲ ಎಸೆತವನ್ನು ಪುಲ್ ಮಾಡಿದರು. ಬೌಂಡರಿ ಲಭಿಸಿತು. ಇನ್ನೊಂದು ಎಸೆತವನ್ನು ಕಟ್ ಮಾಡಿ ಒಂದು ರನ್ ಪಡೆದರು. ಇದರಿಂದಾಗಿ ಇಂಗ್ಲೆಂಡ್ ಸುಲಭ ಜಯ ಸಾಧಿಸುವಂತೆ ಕಂಡಿತ್ತು. ಓವರ್ಟನ್ ಅವರು ದೊಡ್ಡ ಹೊಡೆತಗಳನ್ನು ಪ್ರಯೋಗಿಸುವತ್ತ ಗಮನ ಇಟ್ಟರು. ಇನ್ನೊಂದು ಬದಿಯಲ್ಲಿ ಜೆಮಿ ಸ್ಮಿತ್ ಕೂಡ ಎಚ್ಚರಿಕೆಯಿಂದ ಆಡಿದರು. ಮೊದಲ ಮೂರು ಎಸೆತಗಳಲ್ಲಿ ಅವರಿಬ್ಬರ ಯೋಜನೆ ಫಲ ನೀಡಿತು.

ನಂತರದ ಓವರ್ನಲ್ಲಿ ಸಿರಾಜ್ ಅವರ ಎರಡು ಎಸೆತಗಳಲ್ಲಿ ಸ್ಮಿತ್ ಬೀಟ್ ಆದರು. ಮೂರನೇ ಎಸೆತದಲ್ಲಿ ಸ್ಮಿತ್ ಬ್ಯಾಟ್ ಸವರಿದ ಚೆಂಡು ವಿಕೆಟ್ಕೀಪರ್ ಧ್ರುವ ಜುರೇಲ್ ಕೈಸೇರಿತು. ಅದೇ ಓವರ್ನ ಇನ್ನೊಂದು ಎಸೆತದಲ್ಲಿ ಕೆ.ಎಲ್. ರಾಹುಲ್ ಕ್ಯಾಚ್ ಕೈಚೆಲ್ಲಿದ್ದರಿಂದ ಗಸ್ ಅಟ್ಕಿನ್ಸನ್ ಜೀವದಾನ ಪಡೆದರು. ಸಿರಾಜ್ ಅವರ ಔಟ್ಸ್ವಿಂಗರ್ಗಳು, ನೇರ ಎಸೆತಗಳನ್ನು ಆಡಲು ಬ್ಯಾಟರ್ಗಳು ಪರದಾಡಿದರು.

ಸಿರಾಜ್ ಅವರು ಜೆಮಿ ಓವರ್ಟನ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ಇನ್ನೊಂದೆಡೆ ಪ್ರಸಿದ್ಧ ಕೂಡ ಬೆಂಕಿ ಚೆಂಡು ಎಸೆದರು. ಜೋಶ್ ಟಂಗ್ ಅವರ ವಿಕೆಟ್ ಉರುಳಿಸಿದರು. ಇಂಗ್ಲೆಂಡ್ಗೆ 17 ರನ್ಗಳ ಅಗತ್ಯವಿದ್ದಾಗ 9 ವಿಕೆಟ್ಗಳು ಪತನವಾಗಿದ್ದವು. ಈ ಹಂತದಲ್ಲಿ ಗಾಯಾಳು ಕ್ರಿಸ್ ವೋಕ್ಸ್ ಕ್ರೀಸ್ಗೆ ಬಂದರು. ಪಂದ್ಯದ ಮೊದಲ ದಿನದಾಟದಲ್ಲಿ ಅವರು ಫೀಲ್ಡಿಂಗ್ ಮಾಡುವಾಗ ಡೈವ್ ಮಾಡಿದ್ದಾಗ ಭುಜದ ಮೂಳೆಮುರಿತವಾಗಿತ್ತು. ತಮ್ಮ ಎಡಗೈಗೆ ಬ್ಯಾಂಡೆಜ್ ಕಟ್ಟಿಕೊಂಡಿದ್ದ ವೋಕ್ಸ್ ಇನ್ನೊಂದು ಕೈಯಲ್ಲಿ ಬ್ಯಾಟ್ ಹಿಡಿದು ಕ್ರೀಸ್ಗೆ ಬಂದರು. ಅವರಿಗೆ ಬ್ಯಾಟಿಂಗ್ ಸಿಗದಂತೆ ಎಚ್ಚರಿಕೆ ವಹಿಸಿದ ಅಟ್ಕಿನ್ಸನ್ ಅವರು ಸಿರಾಜ್ ಎಸೆತದಲ್ಲಿ ಒಂದು ಸಿಕ್ಸರ್ ಎತ್ತಿದರು. ಓವರ್ ಕೊನೆಯಲ್ಲಿ ಒಂದು ರನ್ ಗಳಿಸಿ ಬ್ಯಾಟಿಂಗ್ ತಮಗೇ ಬರುವಂತೆ ನೋಡಿಕೊಂಡ ಅಟ್ಕಿನ್ಸನ್ ಮತ್ತೆ 3 ರನ್ಗಳನ್ನು ಕಲೆಹಾಕದಿರು. ಇನ್ನೇನು ಗೆಲುವಿಗೆ 7 ರನ್ ಮಾತ್ರ ಅಗತ್ಯವಿತ್ತು. ಸಿರಾಜ್ ಅವರ ಇನ್ಸ್ವಿಂಗ್ ಎಸೆತಕ್ಕೆ ಅಟ್ಕಿನ್ಸನ್ ವಿಕೆಟ್ ಉರುಳಿತು. ಭಾರತದ ಸಂಭ್ರಮ ಗರಿಗೆದರಿತು. ಶುಭಮನ್ ಗಿಲ್ ನಾಯಕತ್ವದ ಯುಗಕ್ಕೆ ಚೆಂದದ ಆರಂಭ ದೊರೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.