ಸೋಮವಾರ, ಜೂನ್ 1, 2020
27 °C
ಭಾರತ ಕ್ರಿಕೆ್ಟ್ ತಂಡದ ಥ್ರೋಡೌನ್ ಪರಿಣತನ ಬಗ್ಗೆ ಕೊಹ್ಲಿ ಮೆಚ್ಚುಗೆ

ವೇಗಿಗಳ ಎದುರು ಆಡಲು ನೆರವಾದ ಕನ್ನಡಿಗ ರಘು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಭಾರತ ಕ್ರಿಕೆಟ್‌ ತಂಡದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ, ಥ್ರೋಡೌನ್ ಪರಿಣತ ರಾಘವೇಂದ್ರ ದೇವಗಿ (ರಘು) ಅವರ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ.

’ನಮ್ಮ ತಂಡವು 2013ರಿಂದ ವೇಗದ ಬೌಲರ್‌ಗಳ ಎದುರು ಉತ್ತಮವಾಗಿ ಆಡುತ್ತಿದೆ. ಬ್ಯಾಟ್ಸ್‌ಮನ್‌ಗಳು ಪಾದಚಲನೆ, ಹೊಡೆತಗಳ ಆಯ್ಕೆಗನ್ನು ನಿಖರವಾಗಿ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ರಘು‘ ಎಂದು ಕೊಹ್ಲಿ ಹೇಳಿದ್ದಾರೆ.

ಇನ್ಸ್ಟಾಗ್ರಾಮ್‌ ಲೈವ್‌ನಲ್ಲಿ ಬಾಂಗ್ಲಾದೇಶದ ಆಟಗಾರ ತಮೀಮ್ ಇಕ್ಬಾಲ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಕೊಹ್ಲಿ ಈ ಮಾತುಗಳನ್ನು ಹೇಳಿದ್ದಾರೆ.

’ಸೈಡ್‌ ಆರ್ಮ್ ಸಲಕರಣೆಯಿಂದ ಚೆಂಡನ್ನು ಬ್ಯಾಟ್ಸ್‌ಮನ್‌ಗಳಿಗೆ ವಿವಿಧ ಕೋನಗಳಲ್ಲಿ ಪ್ರಯೋಗಿಸುವುದನ್ನು ರಘು ಕರಗತ ಮಾಡಿಕೊಂಡಿದ್ದಾರೆ. ನೆಟ್ಸ್‌ನಲ್ಲಿ ಅವರು ಹಾಕುವ ಎಸೆತಗಳ ವೇಗವು ಬೇರೆ ಬೇರೆ ರೀತಿಯಲ್ಲಿರುತ್ತದೆ. ಅದರಿಂದಾಗಿ  ಪಂದ್ಯದಲ್ಲಿ ಬೌಲರ್‌ಗಳನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚುತ್ತದೆ‘ ಎಂದು ವಿರಾಟ್ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು