ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಸ್ಟ್ ಕ್ರಿಕೆಟ್‌: ಆಸೀಸ್ ವಿರುದ್ಧ ಚೊಚ್ಚಲ ಜಯ ದಾಖಲಿಸಿದ ಭಾರತದ ಮಹಿಳೆಯರು

Published 24 ಡಿಸೆಂಬರ್ 2023, 10:20 IST
Last Updated 24 ಡಿಸೆಂಬರ್ 2023, 10:20 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭಾರತದ ವನಿತೆಯರ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಪಂದ್ಯದ ಅಂತಿಮ ದಿನವಾದ ಇಂದು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಭಾರತ ತಂಡದ ಆಟಗಾರ್ತಿಯರು ಐತಿಹಾಸಿಕ ಜಯಕ್ಕೆ ಸಾಕ್ಷಿಯಾದರು.

ಶನಿವಾರದ ದಿನದಾಟದ ಅಂತ್ಯಕ್ಕೆ 2ನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು 28 ರನ್ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್ ಕಳೆದುಕೊಂಡಿತು. ಕೇವಲ 75 ರನ್ ಗುರಿ ಪಡೆದ ಭಾರತ ತಂಡವು ನಿರಾಯಾಸವಾಗಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ತಂಡವನ್ನು ಗೆಲುವಿನ ದಡ ಸೇರಿಸಿದ ಸ್ಮೃತಿ ಮಂದಾನ (ಔಟಾಗದೆ 38 ರನ್) ಮತ್ತು ಜೆಮಿಮಾ ರಾಡ್ರಿಗಸ್ (ಔಟಾಗದೆ 12 ರನ್) ವಿಶ್ವ ಶ್ರೇಷ್ಠ ತಂಡದ ವಿರುದ್ಧದ ಜಯವನ್ನು ಸಂಭ್ರಮಿಸಿದರು.

ಈವರೆಗೆ ಒಟ್ಟು 40 ಟೆಸ್ಟ್ ಪಂದ್ಯಗಳನ್ನು ಆಡಿರುವ ಭಾರತದ ವನಿತೆಯರ ತಂಡ 7 ಜಯ, 6 ಸೋಲು ಮತ್ತು 27 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಈ ಪಂದ್ಯದಲ್ಲಿ ಭಾರತದ ವನಿತೆಯರ ಆಕ್ರಮಣಕಾರಿ ಆಟ ವಿಶ್ವದ ಗಮನ ಸೆಳೆದಿದೆ.

ಇಂಗ್ಲೆಂಡ್ ವಿರುದ್ಧ ಕಳೆದ ವಾರ ನಡೆದ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್, ಶುಭಾ ಸತೀಶ್ ಮತ್ತು ರೇಣುಕಾ ಸಿಂಗ್ ಟಾಕೂರ್‌ರಂತಹ ಟೆಸ್ಟ್ ಕ್ರಿಕೆಟ್‌ನ ಹೊಸ ಪ್ರತಿಭೆಗಳನ್ನು ಕ್ರಿಕೆಟ್ ಜಗತ್ತು ಕಂಡಿತ್ತು. ಇಲ್ಲಿ ಪದಾರ್ಪಣೆ ಪಂದ್ಯದಲ್ಲೇ ಮೊದಲ ಇನಿಂಗ್ಸ್‌ನಲ್ಲಿ 52 ರನ್ ಸಿಡಿಸಿದ ರಿಚಾ ಘೋಷ್‌ ಗಮನ ಸೆಳೆದಿದ್ದಾರೆ.

ಅಂತಿಮ ದಿನದಾಟದಲ್ಲಿ ಭಾರತದ ಸ್ಪಿನ್ನರ್‌ಗಳಾದ ಸ್ನೇಹ ರಾಣಾ, ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮಾ ಆಸ್ಟ್ರೇಲಿಯಾದ ಬ್ಯಾಟಿಂಗ್ ಪಡೆಯನ್ನು ಧೂಳೀಪಟ ಮಾಡಿದರು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 77.4 ಓವರ್‌ಗಳಲ್ಲಿ 219. ಭಾರತ: 126.3 ಓವರ್‌ಗಳಲ್ಲಿ 406.

ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 105.4 ಓವರ್‌ಗಳಲ್ಲಿ 261, ಭಾರತ 18.4 ಓವರ್‌ಗಳಲ್ಲಿ 75/3(ಸ್ಮೃತಿ ಮಂದಾನ 38*, ರಿಚಾ ಘೋಷ್ ಘೋಷ್ 13, ಜೆಮಿಮಾ ರಾಡ್ರಿಗಸ್ 12*)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT