ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈನಲ್ಲಿ ಭಾರತ ತಂಡದ ಲಂಕಾ ಪ್ರವಾಸ

Published 29 ನವೆಂಬರ್ 2023, 19:57 IST
Last Updated 29 ನವೆಂಬರ್ 2023, 19:57 IST
ಅಕ್ಷರ ಗಾತ್ರ

ಕೊಲಂಬೊ: ಬಿಕ್ಕಟ್ಟು ಎದುರಿಸುತ್ತಿರುವ ಶ್ರಿಲಂಕಾ ಕ್ರಿಕೆಟ್‌ ಮತ್ತು ಅದರ ಪ್ರಸಾರ ಸಂಸ್ಥೆಗೆ ಖುಷಿಯ ಸುದ್ದಿಯೊಂದಿದೆ. ಭಾರತ ಕ್ರಿಕೆಟ್‌ ತಂಡವು 2024ರ ಜುಲೈ–ಆಗಸ್ಟ್‌ನಲ್ಲಿ ಆರು ಸೀಮಿತ ಓವರುಗಳ ಪಂದ್ಯಗಳನ್ನಾಡಲು ದ್ವೀಪರಾಷ್ಟ್ರಕ್ಕೆ ಅಲ್ಪಾವಧಿಯ ಪ್ರವಾಸವನ್ನು ಕೈಗೊಳ್ಳಲಿದೆ ಎಂದು ಮಂಡಳಿ ಬುಧವಾರ ಪ್ರಕಟಿಸಿದೆ.

ಶ್ರೀಲಂಕಾ ಕ್ರಿಕೆಟ್‌ನಲ್ಲಿ ಸರ್ಕಾರದ ಹಸ್ತಕ್ಷೇಪ ವಿರೋಧಿಸಿ ಐಸಿಸಿಯು ಇತ್ತೀಚೆಗೆ ಆ ದೇಶದ ಕ್ರಿಕೆಟ್ ಮಂಡಳಿಯ ಮೇಲೆ ನಿಷೇಧ ಹೇರಿದೆ. 19 ವರ್ಷದೊಳಗಿನವರ ವಿಶ್ವಕಪ್‌ ಕೂಡ ಅಲ್ಲಿಂದ ದಕ್ಷಿಣ ಆಫ್ರಿಕಕ್ಕೆ ಸ್ಥಳಾಂತರಿಸಿದೆ. ಆದರೆ ಈಗಾಗಲೇ ಬದ್ಧರಾಗಿರುವ ದ್ವಿಪಕ್ಷೀಯ ಸರಣಿಗಳನ್ನು ನಡೆಸಲು ರಾಷ್ಟ್ರೀಯ ತಂಡಗಳಿಗೆ ಅವಕಾಶ ನೀಡಲಾಗಿದೆ.

ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಬಿಡುಗಡೆ ಮಾಡಿರುವ 2024ರ ಕ್ಯಾಲೆಂಡರ್ ಪ್ರಕಾರ, ಭಾರತ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT