ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

19 ವರ್ಷದೊಳಗಿನವರ ‘ಟೆಸ್ಟ್‌’: ಭಾರತದ ಧಾವಂತಕ್ಕೆ ಸ್ಪಿನ್ನರ್‌ಗಳ ಕಡಿವಾಣ

Published : 1 ಅಕ್ಟೋಬರ್ 2024, 14:18 IST
Last Updated : 1 ಅಕ್ಟೋಬರ್ 2024, 14:18 IST
ಫಾಲೋ ಮಾಡಿ
Comments

ಚೆನ್ನೈ: ಆರಂಭ ಆಟಗಾರ ವೈಭವ್ ಸೂರ್ಯವಂಶಿ ಶತಕ ಹೊಡೆದರೂ, ಕೆಳಮಧ್ಯಮ ಕ್ರಮಾಂಕ ಕುಸಿದ ಕಾರಣ, 19 ವರ್ಷದೊಳಗಿನವರ ಮೊದಲ ‘ಅನೌಪಚಾರಿಕ’ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಎರಡನೇ ದಿನ ಭಾರತದ ಮುನ್ನಡೆಯನ್ನು ಆಸ್ಟ್ರೇಲಿಯಾ ತಂಡದ ಸ್ಪಿನ್ನರ್‌ಗಳು ಕೇವಲ ಮೂರು ರನ್‌ಗಳಿಗೆ ಸೀಮಿತಗೊಳಿಸಿದರು.

ಆಫ್‌ ಸ್ಪಿನ್ನರ್‌ ಥಾಮಸ್‌ ಬ್ರೌನ್ (79ಕ್ಕೆ3) ಮತ್ತು ಲೆಗ್‌ ಸ್ಪಿನ್ನರ್‌ ವಿಶ್ವ ರಾಮಕುಮಾರ್ (79ಕ್ಕೆ4) ಎರಡನೇ ದಿನ ಗಮನ ಸೆಳೆದರು. ಮಂಗಳವಾರ ಎರಡನೇ ದಿನದಾಟ ಮುಗಿದಾಗ ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 110 ರನ್ ಗಳಿಸಿದೆ.

ಸೋಮವಾರ ಔಟಾಗದೇ 81 ರನ್ ಗಳಿಸಿದ್ದ, ಸೂರ್ಯವಂಶಿ ಬಿರುಸಿನ ಆಟ ಮುಂದುವರಿಸಿ ಶತಕ ಪೂರೈಸಿದರು. ಅವರು 104 ರನ್‌ಗಳು ಕೇವಲ 62 ಎಸೆತಗಳಲ್ಲಿ 14 ಬೌಂಡರಿ, ನಾಲ್ಕು ಸಿಕ್ಸರ್‌ಗಳ ನೆರವಿನಿಂದ ಬಂದವು. ವಿಹಾನ್ ಮಲ್ಹೋತ್ರಾ (76, 108ಎ, 13x4, 1x6) ) ಜೊತೆ ಮೊದಲ ವಿಕೆಟ್‌ಗೆ  133 ರನ್‌ ಜೊತೆಯಾಟದಲ್ಲಿ ಭಾಗಿಯಾದರು.

ಸೋಹಮ್‌ ಪಟವರ್ಧನ್ (33) ಮತ್ತು ಅಭಿಗ್ಯಾನ್ ಕುಂಡು (32) ಐದನೇ ವಿಕೆಟ್‌ಗೆ 57 ರನ್ ಜೊತೆಯಾಟವಾಡಿದಾರು. ಆದರೆ ಬಳಿಕ ಭಾರತ ‘ಎ’ ಕುಸಿತ ಕಂಡು 300ರ ಗಡಿ ದಾಟಲಾಗಲಿಲ್ಲ. ಕೊನೆಯ ಐದು ವಿಕೆಟ್‌ಗಳು 46 ರನ್‌ಗಳಿಗೆ ಉರುಳಿದವು.

ಆಸ್ಟ್ರೇಲಿಯಾ ಪರ ಎರಡನೇ ಸರದಿಯಲ್ಲಿ ಆರಂಭ ಆಟಗಾರ ರಿಲಿ ಕಿಂಗ್ಸೆಲ್ ಮತ್ತು ಒಲಿವರ್ ಪೀಕೆ (32) ಎರಡನೇ ವಿಕೆಟ್‌ಗೆ 72 ರನ್ ಸೇರಿಸಿದರು. ಆದರೆ ಲೆಗ್‌ ಸ್ಪಿನ್ನರ್‌ ಮೊಹಮ್ಮದ್‌ ಇನಾನ್ ಎರಡು ವಿಕೆಟ್ ಪಡೆದು ಪ್ರವಾಸಿಗರು ಮೇಲುಗೈಗೆ ತಡೆಯೊಡ್ಡಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡ: 293; ಭಾರತ 19 ವರ್ಷದೊಳಗಿನವರ ತಂಡ: 296 (ವೈಭವ್ ಸೂರ್ಯವಂಶಿ 104 ವಿಹಾನ್ ಮಲ್ಹೋತ್ರಾ 76; ಥಾಮಸ್‌ ಬ್ರೌನ್ 79ಕ್ಕೆ3, ವಿಶ್ವ ರಾಮಕುಮಾರ್ 79ಕ್ಕೆ4); ಎರಡನೇ ಇನಿಂಗ್ಸ್‌: ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡ: 39 ಓವರುಗಳಲ್ಲಿ 4ಕ್ಕೆ 110 (ರಿಲಿ ಕಿಂಗ್ಸೆಲ್‌ 48, ಒಲಿವರ್ ಪೀಕ್ 32; ಮೊಹಮ್ಮದ್ ಇನಾನ್ 33ಕ್ಕೆ2, ಆದಿತ್ಯ ಸಿಂಗ್ 18ಕ್ಕೆ1, ಸೋಹಮ್ ಪಟವರ್ಧನ್ 18ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT