ಹ್ಯಾಮಿಲ್ಟನ್:ಗುರುವಾರ ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಎದುರಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ಮನ್ಗಳು ತರಗೆಲೆಗಳಿಂದ ಪೆವಿಲಿಯನ್ ಹಾದಿ ಹಿಡಿದು, ಕೇವಲ 92 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್,ಟ್ರೆಂಟ್ ಬೌಲ್ಟ್ ನಡೆಸಿದ ಮಾರಕ ಬೌಲಿಂಗ್ ಸಹಾಯದಿಂದ ಭಾರತವನ್ನು ಅತ್ಯಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಸಫಲವಾಯಿತು. ಭಾರತ ತಂಡದ ಹೊಣೆ ಹೊತ್ತಿರುವ ರೋಹಿತ್ ಶರ್ಮಾ, ತನ್ನ 200ನೇ ಪಂದ್ಯದಲ್ಲಿ ರನ್ ಗಳಿಸಲು ತಿಣುಕಾಡಿದರು. 23 ಬಾಲ್ಗಳಿಗೆ 7ರನ್ ಗಳಿಸಿ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು.

ಸಿಕ್ಸ್ ಮತ್ತು ಬೌಂಡರಿ ಹೊಡೆತದಿಂದ ಶಿಖರ್ ಧವನ್ ಉತ್ತಮ ರನ್ ಗಳಿಸುವ ಭರವಸೆ ಮೂಡಿಸಿದರಾದರೂ, ಬೌಲ್ಟ್ ದಾಳಿಗೆ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 21 ರನ್ ನೀಡಿದ ಟ್ರೆಂಟ್ ಬೌಲ್ಟ್ ಪ್ರಮುಖ 5 ವಿಕೆಟ್ಗಳನ್ನು ಪಡೆಯುವ ಮೂಲಕ ಭಾರತ ತಂಡವನ್ನು ಸಂಕಷ್ಟದಲ್ಲಿ ಸಿಲುಕಿಸಿದರು. ಕೊನೆಯ ಕ್ರಮಾಂಕದಲ್ಲಿ ಕುಲದೀಪ್ ಯಾದವ್ ಮತ್ತು ಚಾಹಲ್ ತಾಳ್ಮೆಯ ಆಟ ಪ್ರದರ್ಶಿಸಿದರು. ಹಾರ್ದಿಕ್ ಪಾಂಡ್ಯ ನಾಲ್ಕು ಬೌಂಡರಿ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ಉತ್ತಮ ಆಟ ಪ್ರದರ್ಶಿಸಲಿಲ್ಲ.

93 ರನ್ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನತ್ತಿರುವ ನ್ಯೂಜಿಲೆಂಡ್, 6.4ಓವರ್ಗಳಲ್ಲಿ 2ವಿಕೆಟ್ ನಷ್ಟಕ್ಕೆ 39ರನ್ಗಳಿಸಿದೆ.

ಭಾರತ: 30.5 ಓವರ್, 92 ರನ್, ಎಲ್ಲ ವಿಕೆಟ್ ಪತನ

ರೋಹಿತ್ ಶರ್ಮಾ (ನಾಯಕ) 7, ಶಿಖರ್ ಧವನ್ 13,ಶುಭಮನ್ ಗಿಲ್ 9, ಅಂಬಟಿ ರಾಯುಡು 0, ದಿನೇಶ್ ಕಾರ್ತಿಕ್ 0, ಕೇದಾರ್ ಜಾಧವ್ 1, ಹಾರ್ದಿಕ್ ಪಾಂಡ್ಯ 16, ಕುಲದೀಪ್ ಯಾದವ್ 15, ಭುವನೇಶ್ವರ್ ಕುಮಾರ್ 1, ಯಜುವೇಂದ್ರ ಚಾಹಲ್ 18, ಖಲೀಲ್ ಅಹಮದ್ 5,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.