ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌: ಮತ್ತೆ ಶತಕ ಬಾರಿಸಿದ ಮಯಂಕ್

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್ ಪಂದ್ಯ: ಪೂಜಾರ, ವಿರಾಟ್ ಅರ್ಧಶತಕ
Last Updated 10 ಅಕ್ಟೋಬರ್ 2019, 20:12 IST
ಅಕ್ಷರ ಗಾತ್ರ

ಪುಣೆ: ಸಿಕ್ಸರ್..ಸಿಕ್ಸರ್‌..ಬೌಂಡರಿ.. ಕರ್ನಾಟಕದ ಮಯಂಕ್ ಅಗರ ವಾಲ್ ಗುರುವಾರ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಶತಕದ ಗಡಿ ತಲುಪಿದ ಪರಿ ಇದು.

ದಕ್ಷಿಣ ಆಫ್ರಿಕಾ ವಿರುದ್ಧ ಆರಂಭ ವಾದ ಎರಡನೇ ಟೆಸ್ಟ್‌ನ ಮೊದಲ ದಿನ ತಮ್ಮ ಆಕರ್ಷಕ ಶೈಲಿಯ ಬ್ಯಾಟಿಂಗ್ ಮೂಲಕ ಮಯಂಕ್ ಮತ್ತೊಮ್ಮೆ ಕ್ರಿಕೆಟ್‌ ಅಭಿಮಾನಿಗಳ ಹೃದಯ ಗೆದ್ದರು. ತಾಳ್ಮೆಯ ಆಟದ ಜೊತೆಗೆ ತಮ್ಮ ಆತ್ಮವಿಶ್ವಾಸ ಮತ್ತು ದಿಟ್ಟತನವನ್ನೂ ಅವರು ತೋರಿದರು. ಅವರು 87 ರನ್‌ ಗಳಿಸಿದ್ದ ಸಂದರ್ಭದಲ್ಲಿ ಸತತ ಎರಡು ಸಿಕ್ಸರ್ ಬಾರಿಸಿದರು.

99 ರನ್‌ನಲ್ಲಿದ್ದ ಅವರು ಮೂರು ಎಸೆತಗಳ ನಂತರ ಬೌಂಡರಿ ಹೊಡೆದು ಶತಕ ಪೂರೈಸಿದರು. ಅವರ ಆಟದ ಬಲದಿಂದ ಭಾರತ ತಂಡವು ದಿನದಾಟದ ಕೊನೆಗೆ 85.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 273 ರನ್ ಗಳಿಸಿತು.‌ಅರ್ಧಶತಕ ಗಳಿ ಸಿರುವ ನಾಯಕ ವಿರಾಟ್ ಕೊಹ್ಲಿ (ಬ್ಯಾಟಿಂಗ್ 63) ಮತ್ತು ಅಜಿಂಕ್ಯ ರಹಾನೆ (ಬ್ಯಾಟಿಂಗ್ 18) ಕ್ರೀಸ್‌ನಲ್ಲಿದ್ದಾರೆ.

ಮನಮೋಹಕ ಮಯಂಕ್: ಹೋದ ವಾರವಷ್ಟೇ ವಿಶಾಖಪಟ್ಟಣ ದಲ್ಲಿ ದ್ವಿಶತಕ ಬಾರಿಸಿದ್ದ ಮಯಂಕ್ ಪುಣೆಯಲ್ಲಿಯೂ ಮ್ಯಾಜಿಕ್ ಮಾಡಿ ದರು. ಅವರ ಆರಂಭಿಕ ಜೊತೆಗಾರ ರೋಹಿತ್ ಶರ್ಮಾ ಮಾತ್ರ ಇಲ್ಲಿ ವಿಫಲರಾದರು. ಅವರು ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದ್ದರು. ಆದರೆ, ಇಲ್ಲಿ ಕೇವಲ 14 ರನ್ ಗಳಿಸಿ ಔಟಾದರು. ಹನ್ನೊಂದನೇ ಓವರ್‌ನಲ್ಲಿ ಮಯಂಕ್ ಜೊತೆಗೆ ಸೇರಿದ ಚೇತೇಶ್ವರ್ ಪೂಜಾರ ಇನಿಂಗ್ಸ್‌ ಕಟ್ಟಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ 138 ರನ್‌ಗಳನ್ನು ಸೇರಿಸಿದರು. ಇದರಲ್ಲಿ ಮಯಂಕ್ ಆಟವೇ ಪ್ರಮುಖವಾಗಿತ್ತು. ‌

ಆರಂಭದಲ್ಲಿ ಮಯಂಕ್ ಎಚ್ಚರಿಕೆಯ ಆಟವಾಡಿದರು. ಎದುರಾಳಿ ಬಳಗದಲ್ಲಿ ಕಗಿಸೊ ರಬಾಡ ಒಬ್ಬರೇ ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದರು. ಉಳಿದವರಿಂದ ಅಂತಹ ಮೊನಚಾದ ಅಸ್ತ್ರಗಳು ಬರಲಿಲ್ಲ. ಆದರೂ ಮಯಂಕ್ ಆಟ ರಂಗೇರಿತು. ಕೇಶವ್ ಮಹಾರಾಜ್ ಹಾಕಿದ 56ನೇ ಓವರ್‌ನಲ್ಲಿ ಮಯಂಕ್ ಸತತ ಎರಡು ಸಿಕ್ಸರ್ ಬಾರಿಸಿದರು. ನಂತರ ಫಿಲಾಂಡರ್ ಹಾಕಿದ 57ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಗಲ್ಲಿ ಫೀಲ್ಡರ್‌ ಪಕ್ಕದಿಂದ ಚೆಂಡನ್ನು ಬೌಂಡರಿಗಟ್ಟಿದ ಮಯಂಕ್ ಸಂಭ್ರಮಿಸಿದರು. ಇನ್ನೊಂದು ಬದಿಯಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ಅವರು ಮಯಂಕ್ ಅವರನ್ನು ಬಿಗಿದಪ್ಪಿ ಸಂಭ್ರಮಿಸಿದರು.

ಇದಕ್ಕೂ ಮುನ್ನ ಚೇತೇಶ್ವರ್ ಪೂಜಾರ 51ನೇ ಓವರ್‌ನಲ್ಲಿ ಔಟಾ ದರು. ನಂತರ ವಿರಾಟ್ ಕೂಡ ತಮ್ಮ ಆಟಕ್ಕೆ ಕುದುರಿದರು. 61ನೇ ಓವರ್‌ ನಲ್ಲಿ ಮಯಂಕ್ ಅವರು ರಬಾಡ ಎಸೆತವನ್ನು ಕಟ್ ಮಾಡುವ ಯತ್ನದಲ್ಲಿ ವಿಕೆಟ್‌ಕೀಪರ್ ಕ್ವಿಂಟನ್‌ ಡಿಕಾಕ್‌ಗೆ ಕ್ಯಾಚಿತ್ತರು.

ಈ ಹಂತದಲ್ಲಿ ವಿರಾಟ್ ಜೊತೆ ಗೂಡಿದ ಅಜಿಂಕ್ಯ ರಹಾನೆ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 75 ರನ್ ಸೇರಿಸಿದರು. ದಕ್ಷಿಣ ಆಫ್ರಿಕಾ ತಂಡದ ರಬಾಡ ಮೂರು ವಿಕೆಟ್ ಗಳಿಸಿ ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT