ಶನಿವಾರ, ಅಕ್ಟೋಬರ್ 19, 2019
28 °C
ಎರಡನೇ ಪಂದ್ಯದಲ್ಲೂ ಗೆದ್ದ ಭಾರತ

ಮಹಿಳಾ ಕ್ರಿಕೆಟ್‌: ಮಿತಾಲಿ–ಪೂನಮ್‌ ಅಮೋಘ ಜೊತೆಯಾಟ

Published:
Updated:
Prajavani

ವಡೋದರ: ನಾಯಕಿ ಮಿತಾಲಿ ರಾಜ್‌ (66; 82ಎ, 8ಬೌಂ) ಮತ್ತು ಪೂನಮ್‌ ರಾವುತ್‌ (65; 92ಎ, 7ಬೌಂ) ಅವರ ಅಮೋಘ ಜೊತೆಯಾಟದ ಬಲದಿಂದ ಭಾರತ ಮಹಿಳಾ ತಂಡದವರು ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಗೆದ್ದಿದ್ದಾರೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಗಳಿಸಿದ್ದಾರೆ.

ರಿಲಯನ್ಸ್‌ ಮೈದಾನದಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ಸ್ಯೂನ್‌ ಲುಸ್‌ ಸಾರಥ್ಯದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 247ರನ್‌ ದಾಖಲಿಸಿತು.

ಸವಾಲಿನ ಗುರಿಯನ್ನು ಮಿತಾಲಿ ಬಳಗ 48 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಗುರಿ ಬೆನ್ನಟ್ಟಿದ ಭಾರತ 66ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಒಂದಾದ ಮಿತಾಲಿ ಮತ್ತು ಪೂನಮ್‌ ದಿಟ್ಟ ಇನಿಂಗ್ಸ್‌ ಕಟ್ಟಿದರು. ಇವರು ಮೂರನೇ ವಿಕೆಟ್‌ಗೆ 129ರನ್‌ ಸೇರಿಸಿದರು. ಒಂದು ರನ್‌ ಅಂತರದಲ್ಲಿ ಈ ಜೋಡಿ ಪೆವಿಲಿಯನ್‌ ಸೇರಿತು. ಬಳಿಕ ಹರ್ಮನ್‌ಪ್ರೀತ್‌ ಕೌರ್‌ (ಔಟಾಗದೆ 39; 27ಎ, 5ಬೌಂ, 1ಸಿ) ವೇಗವಾಗಿ ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 247 (ಲಿಜೆಲ್‌ ಲೀ 40, ಲೌರಾ ವೊಲ್ವಾರ್ಡ್ತ್  69, ತ್ರಿಷಾ ಚೆಟ್ಟಿ 22, ಮಿಗ್ನೊನ್‌ ಡು ಪ್ರೀಜ್‌ 44, ಲಾರಾ ಗೂಡಲ್‌ 38, ಸ್ಯೂನ್‌ ಲುಸ್‌ 12, ಮರಿಜಾನ್‌ ಕಾಪ್‌ ಔಟಾಗದೆ 11; ಶಿಖಾ ಪಾಂಡೆ 38ಕ್ಕೆ2, ಏಕ್ತಾ ಬಿಷ್ಠ್‌ 45ಕ್ಕೆ2, ಪೂನಮ್‌ ಯಾದವ್‌ 42ಕ್ಕೆ2).

ಭಾರತ: 48 ಓವರ್‌ಗಳಲ್ಲಿ 5 ವಿಕೆಟ್‌ಗೆ 248 (ಪ್ರಿಯಾ ಪೂನಿಯಾ 20, ಜೆಮಿಮಾ ರಾಡ್ರಿಗಸ್‌ 18, ಪೂನಮ್‌ ರಾವುತ್‌ 65, ಮಿತಾಲಿ ರಾಜ್‌ 66, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 39; ಶಬನಿಮ್‌ ಇಸ್ಮಾಯಿಲ್‌ 41ಕ್ಕೆ1, ಮರಿಜಾನ್‌ ಕಾಪ್‌ 29ಕ್ಕೆ1, ಅಯಬೊಂಗ ಖಾಕಾ 69ಕ್ಕೆ3).

ಫಲಿತಾಂಶ: ಭಾರತಕ್ಕೆ 5 ವಿಕೆಟ್‌ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ.

ಪಂದ್ಯಶ್ರೇಷ್ಠ: ಪೂನಮ್‌ ರಾವುತ್‌.

Post Comments (+)