ಸೋಮವಾರ, ಸೆಪ್ಟೆಂಬರ್ 16, 2019
22 °C
ಮುಂಬೈ ಇಂಡಿಯನ್ಸ್‌ –ಕೋಲ್ಕತ್ತ ನೈಟ್ ರೈಡರ್ಸ್ ಹಣಾಹಣಿ ಇಂದು

ನೈಟ್‌ ರೈಡರ್ಸ್‌ಗೆ ‘ಮಾಡು ಇಲ್ಲವೆ ಮಡಿ’ ಪಂದ್ಯ

Published:
Updated:
Prajavani

ಮುಂಬೈ: ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ ಈ ಗ ‘ಮಾಡು ಇಲ್ಲವೇ ಮಡಿ’ ಸ್ಥಿತಿ. ಭಾನುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ಎದುರು ನಡೆಯಲಿರು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೆದ್ದರೆ ಮಾತ್ರ ಕೆಕೆಆರ್ ತಂಡದ ಪ್ಲೇ ಆಫ್‌ ಕನಸು ಕೈಗೂಡುವ ಸಾಧ್ಯತೆ ಇದೆ.

ಈಗಾಗಲೇ ಪ್ಲೇ ಆಫ್ ಹಂತ ತಲುಪಿರುವ ತಂಡಗಳಲ್ಲಿ ಮುಂಬೈ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇದೆ. ಸದ್ಯ ನಾಲ್ಕನೇ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಕೋಲ್ಕತ್ತ ನೈಟ್ ರೈಡರ್ಸ್‌ ತಂಡಗಳು ತಲಾ 12 ಅಂಕ ಗಳಿಸಿವೆ. ರಾಜಸ್ಥಾನ್ ರಾಯಲ್ಸ್‌ ತಂಡವು 11 ಪಾಯಿಂಟ್ಸ್‌ಗಳೊಂದಿಗೆ ಆರನೇ ಸ್ಥಾನದಲ್ಲಿದೆ. ೀ ಮೂರು ತಂಡಗಳು ತಲಾ ಒಂದು ಪಂದ್ಯ ಆಡಲಿವೆ.  ಆದರೆ, ನಾಲ್ಕನೇ ಸ್ಥಾನ ಪಡೆಯುವ ಹೆಚ್ಚು ಅವಖಾಶ ಇರುವುದು ಸನ್‌ರೈಸರ್ಸ್ ತಂಡಕ್ಕೆ. 

ಏಕೆಂದರೆ  ಸನ್‌ರೈಸರ್ಸ್ ಉತ್ತಮ ರನ್‌ರೇಟ್ (+0.653) ಹೊಂದಿದೆ. ಕೋಲ್ಕತ್ತ (+0.173) ರನ್‌ರೇಟ್ ಗಳಿಸಿದೆ.

ದಿನೇಶ್ ಕಾರ್ತಿಕ್ ಬಳಗವು ಲೀಗ್ ಹಂತದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದೆ. ಆರಂಭದಲ್ಲಿ ಗೆಲುವಿನ ಕುದುರೆ ಏರಿದ್ದ ತಂಡವು ಮಧ್ಯದಲ್ಲಿ ಸತತ ಆರು ಸೋಲುಗಳಿಂದ ತತ್ತರಿಸಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ಮುಂಬೈ ಮತ್ತು ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಗೆದ್ದು ಮತ್ತೆ ಅರಳಿತ್ತು. 

ತಂಡದಲ್ಲಿರುವ ಶುಭಮನ್ ಗಿಲ್, ಕ್ರಿಸ್ ಲಿನ್ ಅವರು ಉತ್ತಮ ಆರಂಭಿಕ ಜೋಡಿಯಾಗಿ ಹೊರಹೊಮ್ಮಿದೆ. ದಿನೇಶ್ ಕಾರ್ತಿಕ್, ಆ್ಯಂಡ್ರೆ ರಸೆಲ್. ಸುನಿಲ್ ನಾರಾಯಣ್ ಮತ್ತುಕನ್ನಡಿಗ ರಾಬಿನ್ ಉತ್ತಪ್ಪ ಅವರು ರನ್‌ ಗಳಿಕೆಗೆ ಕಿಚ್ಚು ಹಚ್ಚುವ ಸಮರ್ಥರು.

ಆದರೆ, ಮುಂಬೈ ತಂಡವು ಎರಡನೇ ಸ್ಥಾನದಲ್ಲಿ ಮತ್ತಷ್ಟು ಭದ್ರವಾಗಿ ಹೆಜ್ಜೆಯೂರಲು ಗೆಲುವಿನತ್ತ ಚಿತ್ತ ನೆಟ್ಟಿದೆ. ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ  ಸಹೋದರರು, ಕ್ವಿಂಟನ್ ಡಿಕಾಕ್, ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಮತ್ತು ಪೊಲಾರ್ಡ್‌ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಜಸ್‌ಪ್ರೀತ್ ಬೂಮ್ರಾ ಮತ್ತು ಲಸಿತ್ ಮಾಲಿಂಗ ಅವರು ಕೊನೆಯ ಹಂತದ ಓವರ್‌ಗಳಲ್ಲಿ ತಂಡಕ್ಕೆ ಜಯದ ಕಾಣಿಕೆ ನೀಡುವ ಸಮರ್ಥರಾಗಿದ್ದಾರೆ. 

Post Comments (+)