ಮಂಗಳವಾರ, ಮೇ 11, 2021
27 °C

IPL 2021: ಬೆಂಗಳೂರು ಬಳಗ ಸೇರಿದ ಡ್ಯಾನಿಯಲ್ ಸ್ಯಾಮ್ಸ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಆಸ್ಟ್ರೇಲಿಯಾದ ಆಲ್‌ರೌಂಡರ್ ಡ್ಯಾನಿಯಲ್ ಸ್ಯಾಮ್ಸ್ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಯೊಬಬಲ್ ಸೇರಿಕೊಂಡರು. ಕೋವಿಡ್–19 ಸೋಂಕಿಗೆ ಒಳಗಾಗಿದ್ದ ಅವರು ಗುಣಮುಖರಾದ ನಂತರ ಒಂದು ವಾರದಲ್ಲಿ ಎರಡು ಬಾರಿ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು. ಎರಡೂ ಪರೀಕ್ಷೆಗಳ ವರದಿ ನೆಗೆಟಿವ್ ಬಂದ ಕಾರಣ ತಂಡವನ್ನು ಸೇರಿಕೊಂಡಿದ್ದಾರೆ.

28 ವರ್ಷದ ಸ್ಯಾಮ್ಸ್ ಏಪ್ರಿಲ್ ಮೂರರಂದು ಭಾರತಕ್ಕೆ ಬಂದಿದ್ದರು. ಆಗ ಕೋವಿಡ್–19 ಪರೀಕ್ಷೆಗೆ ಸಂಬಂಧಿಸಿದ ನೆಗೆಟಿವ್ ವರದಿ ಅವರ ಬಳಿ ಇತ್ತು. ಆದರೆ ಏಳರಂದು ನಡೆದ ಪರೀಕ್ಷೆಯಲ್ಲಿ ಕೋವಿಡ್ ಇರುವುದು ಪತ್ತೆಯಾಗಿತ್ತು. ಹೀಗಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದರು.

‘ಡ್ಯಾನಿಯಲ್ ಸ್ಯಾಮ್ಸ್‌ ಗುಣಮುಖರಾಗಿರುವುದನ್ನು ತಿಳಿಸಲು ಸಂತಸವಾಗುತ್ತಿದೆ. ಆರ್‌ಸಿಬಿ ವೈದ್ಯಕೀಯ ತಂಡ ನಿರಂತರವಾಗಿ ಅವರ ಮೇಲೆ ನಿಗಾ ವಹಿಸುತ್ತಿದೆ. ಡೆಲ್ಲಿ ತಂಡದಿಂದ ಈ ಬಾರಿ ಸ್ಯಾಮ್ಸ್ ಅವರನ್ನು ಆರ್‌ಸಿಬಿ ಖರೀದಿಸಿತ್ತು. ದೇವದತ್ತ ಪಡಿಕ್ಕಲ್ ನಂತರ ಕೋವಿಡ್‌ ಸೋಂಕು ತಗುಲಿದ ಆರ್‌ಸಿಬಿಯ ಎರಡನೇ ಆಟಗಾರ ಸ್ಯಾಮ್ಸ್‌’ ಎಂದು ತಂಡದ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು